ಚುನಾವಣೆಗೆ ಮೊದಲೇ ಪೊಲೀಸ್ ಇಲಾಖೆಯಲ್ಲಿ ಭರ್ಜರಿ ಸರ್ಜರಿ ► ಪಶ್ಚಿಮ ವಲಯ ಹಾಗೂ ಮಂಗಳೂರು ನಗರದ 117 ಸಬ್ ಇನ್ಸ್‌ಪೆಕ್ಟರ್ ಗಳ ವರ್ಗಾವಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.18. ರಾಜ್ಯ ವಿಧಾನ ಸಭಾ ಚುನಾವಣೆ 2018 ರ ವರ್ಗಾವಣಾ ಮಾರ್ಗಸೂಚಿಯನುಸಾರ ಪಶ್ಚಿಮ ವಲಯ ಹಾಗೂ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ 117 ಸಬ್ ಇನ್ಸ್‌ಪೆಕ್ಟರ್ ರವರನ್ನು ವಿವಿಧೆಡೆ ವರ್ಗಾವಣೆ ಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

 

ಕುಕ್ಕೇ ಸುಬ್ರಹ್ಮಣ್ಯದಿಂದ ಹಿಡಿದು ಮಂಗಳೂರು ನಗರದವರೆಗಿನ ಕರಾವಳಿಯಲ್ಲಿನ ಹೆಚ್ಚಿನ ಎಲ್ಲಾ ಪೊಲೀಸ್ ಠಾಣೆಗಳ ಸಬ್ ಇನ್ಸ್‌ಪೆಕ್ಟರ್ ಗಳ ಮತ್ತು ಪಶ್ಚಿಮ ವಲಯದ ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಸಬ್ ಇನ್ಸ್‌ಪೆಕ್ಟರ್ ಗಳನ್ನೂ ಸ್ಥಾನಪಲ್ಲಟಗೊಳಿಸಲಾಗಿದ್ದು, ಮುಂದಿನ 24 ಗಂಟೆಗಳಲ್ಲಿ ಅಧಿಕಾರ ಸ್ವೀಕರಿಸುವಂತೆ ಆದೇಶಿಸಲಾಗಿದೆ.

Also Read  ಮೊಬೈಲ್ ಟವರ್ ನಲ್ಲಿ ವಿದ್ಯುತ್ ಆಘಾತ➤ ಟವರ್ ಮೈಂಟೇನರ್ ಮೃತ್ಯು

error: Content is protected !!
Scroll to Top