ಶಿವರಾತ್ರಿಯಂದು ಕುಮಾರಧಾರಾ ನದಿಯಲ್ಲಿ ಸ್ನಾನಕ್ಕಿಳಿದ ಬಾಲಕರ ರಕ್ಷಣೆಯ ವಿಚಾರ ► ಕೆಲವರು ಪ್ರಚಾರ ಗಿಟ್ಟಿಸಲು ವದಂತಿ ಹಬ್ಬಿಸಿದ್ದಾರೆ: ಬಾಲಕರಿಂದ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಕಡಬ, ಫೆ.18. ಕಳೆದ ಫೆಬ್ರವರಿ 13 ರಂದು ಕುಂತೂರು ಪರಿಸರದ ಎಂಟುಮಂದಿ ಬಾಲಕರನ್ನು ನೀರಿನಿಂದ ರಕ್ಷಿಸಲಾಗಿದೆ ಎಂಬ ವರದಿಯನ್ನು ಕೆಲವು ದಿನಪತ್ರಿಕೆಗಳು ಹಾಗೂ ವೆಬ್‌ಸೈಟ್ ಗಳು ವರದಿ ಮಾಡಿದ್ದು, ಇದು ಸತ್ಯಕ್ಕೆ ದೂರವಾದ ವಿಚಾರ ಎಂದು ವಿದ್ಯಾರ್ಥಿಗಳು ಇದೀಗ ಸ್ಪಷ್ಟೀಕರಣ ನೀಡಿದ್ದಾರೆ.

8 ಮಂದಿ ಗೆಳೆಯರು ಶಿವರಾತ್ರಿ ಪ್ರಯುಕ್ತ ರಜೆ ಇದ್ದ ಕಾರಣ ಉರುಂಬಿ ಕುಮಾರಧಾರಾ ನದಿ ಪರಿಸರಕ್ಕೆ ತೆರಳಿದ್ದು ಮೊಟ್ಟೆ ಬೇಯಿಸಿ ತಿಂದು ಬರುವುದೆಂದು ತೀರ್ಮಾನಿಸಿದ್ದೆವು. ಅಲ್ಲಿನ ಸ್ಥಳೀಯರಲ್ಲಿ ಕೆಲವು ಮಾಹಿತಿಯನ್ನು ಕೇಳಿ ತಿಳಿದುಕೊಂಡಿದ್ದಲ್ಲದೆ ನಾವು ನೀರಿಗೆ ಇಳಿದಿರಲಿಲ್ಲ. ಮಾತ್ರವಲ್ಲದೆ ನಮಗೆ ಸ್ನಾನ ಮಾಡುವ ಯಾವುದೇ ಹಂಬಲವೂ ಇರಲಿಲ್ಲ. ಆದರೆ ಸ್ಥಳೀಯ ಕೆಲವು ವ್ಯಕ್ತಿಗಳು ನಾವು ಉರುಂಬಿಗೆ ಹೋದ ವಿಷಯವನ್ನು ತಿಳಿದು ನಮ್ಮ ಬಗ್ಗೆ ಊರಿನಲ್ಲಿ ‘ಮಕ್ಕಳು ನೀರಿನಲ್ಲಿ ಮುಳುಗಿದ್ದಾರೆ’ ಎಂದು ವದಂತಿ ಹಬ್ಬಿಸಿ ನಮ್ಮನ್ನು ಹುಡುಕಿಕೊಂಡು ಬಂಧುಗಳೊಡನೆ ಉರುಂಬಿಗೆ ಬಂದಿದ್ದರು. ಆ ಸಮಯದಲ್ಲಿ ನಾವು ನದಿ ತಟದಲ್ಲಿ ಕುಳಿತಿದ್ದೆವೇ ಹೊರತು ನೀರಿಗೆ ಇಳಿದಿರಲಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

Also Read  ಕಡಬ ಸಿಇಒ ಅವರಿಂದ ಕೊಂಬಾರು ಬಸ್ ನಿಲ್ದಾಣದಲ್ಲಿರುವ ಪುಸ್ತಕದ ಗೂಡಿಗೆ ಚಾಲನೆ

error: Content is protected !!
Scroll to Top