(ನ್ಯೂಸ್ ಕಡಬ) newskadaba.com ಕಡಬ, ಫೆ.17. ಮರ್ಧಾಳ ತಖ್ವಿಯತುಲ್ ಇಸ್ಲಾಂ ಜಮಾಅತ್ ಕಮಿಟಿಯ ಅಧೀನದಲ್ಲಿರುವ ವತಿಯಿಂದ ನೆಕ್ಕಿತ್ತಡ್ಕ ಮಖಾಂ ಉರೂಸ್ ಸಮಾರಂಭವು 2018 ಫೆಬ್ರವರಿ 18 ಭಾನುವಾರದಂದು ಆರಂಭಗೊಂಡು ಫೆಬ್ರವರಿ 22 ಗುರುವಾರದವರೆಗೆ ನಡೆಯಲಿದೆ.
ಫೆ.18ರಂದು ನೆಕ್ಕಿತ್ತಡ್ಕ ಉರೂಸ್ ಸಮಿತಿ ಅಧ್ಯಕ್ಷ ಜನಾಬ್ ಅಬ್ದುಲ್ ರಹಿಮಾನ್ ಹಾಜಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಮರ್ಧಾಳ ಜೆ.ಎಂ ಅಧ್ಯಕ್ಷ ಸಯ್ಯೀದ್ ಕೆ.ಎಸ್ ಹಮೀದ್ ತಂಙಳ್ ಅಧ್ಯಕ್ಷತೆ ವಹಿಸಲಿದ್ದಾರೆ. ಗೇರುಕಟ್ಟೆಯ ಅಸ್ಸಯ್ಯದ್ ಸಿಟಿಎಂ ಉಮರ್ ಅಸ್ಸಖಾಫ್ ತಂಙಳ್ ದುಃಅ ಆಶೀರ್ವಚನ ನೀಡಲಿದ್ದಾರೆ. ಮರ್ಧಾಳ ಜೆ.ಎಂ. ಖತೀಬರಾದ ಮುಹಮ್ಮದ್ ಹನೀಫ್ ಸಖಾಫಿ ಎಮ್ಮೆಮಾಡು ಮುಖ್ಯ ಪ್ರಭಾಷಣಗೈಯಲಿದ್ದಾರೆ. ಪಾಲೆತ್ತಡ್ಕ ಟಿಐ ಮದ್ರಸ ಮುಅಲ್ಲಿಂ ಅಬ್ದುಲ್ ನಾಸಿರ್ ಸಅದಿ ಉದ್ಘಾಟಿಸಲಿದ್ದಾರೆ. ಫೆಬ್ರವರಿ 19 ರಂದು ಪರ್ತಿಪ್ಪಾಡಿ ಖತೀಬರಾದ ಅಬ್ದುಲ್ ರಹ್ಮಾನ್ ಫೈಝಿ ಮುಖ್ಯ ಪ್ರಭಾಷಣಗೈಯಲಿದ್ದಾರೆ. ಅಲ್ಹಾಫಿಲ್ ಇಸ್ತಿಹಾಕ್ ಆಲಂ ರಝ್ವಿ ಬಿಹಾರ ದುಃವಾಶೀರ್ವಚನ ನೀಡಲಿದ್ದಾರೆ. ಫೆಬ್ರವರಿ 20 ರಂದು ಅಶ್ರಫ್ ಜೌಹರಿ ಎಮ್ಮೆಮಾಡು ಮುಖ್ಯ ಪ್ರಭಾಷಣಗೈಯಲಿದ್ದಾರೆ. ಫೆಬ್ರವರಿ 21 ರಂದು ಹಂಝ ಮಿಸ್ಬಾಹಿ ಓಟಪ್ಪದವು ಮುಖ್ಯ ಪ್ರಭಾಷಣ ಗೈಯಲಿದ್ದಾರೆ. ಫೆಬ್ರವರಿ 22ರಂದು ಮಧ್ಯಾಹ್ನ 3ಕ್ಕೆ ಖತಮುಲ್ ಖುರ್ಆನ್ ನಡೆದು 4ಕ್ಕೆ ಮೌಲಿದ್ ಪಾರಾಯಣ ನಡೆಯಲಿದೆ. ಸಂಜೆ 5ಕ್ಕೆ ಮರ್ದಾಳ ಮಸೀದಿಯಲ್ಲಿ ನೆಕ್ಕಿತ್ತಡ್ಕ ದರ್ಗಾದವರೆಗೆ ಸಂದಲ್ ಮೆರವಣಿಗೆ ನಡೆಯಲಿದೆ. ಮಗ್ರಿಬ್ ನಮಾಜಿನ ನಂತರ ಸೌಹಾರ್ದ ಸಭೆ ನಡೆಯಲಿದೆ. ಮದರ್ಾಳ ಜೆಎಂ ಅಧ್ಯಕ್ಷ ಸಯ್ಯಿದ್ ಕೆ.ಎಸ್ ಹಮೀದ್ ತಂಙಳ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಣಿ ಹಸನ್ ಅಹ್ಸನಿ ಮುಖ್ಯ ಪ್ರಭಾಷಣ ಗೈಯಲಿದ್ದಾರೆ.
ಆಹಾರ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ಜನಾಬ್ ಯು.ಟಿ ಖಾದರ್, ಸುಬ್ರಹ್ಮಣ್ಯ ಪ್ರೌಢಶಾಲಾ ಮುಖ್ಯಸ್ಥ ಯಶವಂತ್ ರೈ, ನೆಕ್ಕಿತ್ತಡ್ಕ ಉರೂಸ್ ಸಮಿತಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ, ಜಿ.ಪಂ.ಸದಸ್ಯ ಪಿ.ಪಿ. ವರ್ಗೀಸ್, ಕರ್ನಾಟಕ ರಾಜ್ಯ ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಹಾಜಿ ಸೈಯದ್ ಮೀರಾ ಸಾಹೇಬ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.