ಉಳ್ಳಾಲ ಖಾಝಿಯಾಗಿ ಕಾಂತಪುರಂ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ನೇಮಕ – ಅಗಸ್ಟ್ 05 ರಂದು ಅಧಿಕಾರ ಸ್ವೀಕಾರ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.22. ಉಳ್ಳಾಲ ನೂತನ ಖಾಝಿಯಾಗಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ನೇಮಕವಾಗಿದ್ದಾರೆ.

ಇತ್ತೀಚೆಗಷ್ಟೇ ಉಳ್ಳಾಲ ಖಾಝಿಯಾಗಿದ್ದ ಫಝಲ್‌ ಕೋಯಮ್ಮ ಕೂರತ್ ತಂಙಳ್ ನಿಧನದ ಹಿನ್ನೆಲೆಯಲ್ಲಿ ತೆರವಾಗಿದ್ದ ಖಾಝಿ‌ ಸ್ಥಾನಕ್ಕೆ ಭಾನುವಾರದಂದು ನಡೆದ ಸಭೆಯಲ್ಲಿ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಆಗಸ್ಟ್ 05ರಂದು ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಸ್ಪೀಕರ್‌ ಯು.ಟಿ ಖಾದರ್‌, ನೂತನ ಖಾಝಿ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅವರ ನೇತೃತ್ವದಲ್ಲಿ ಉಳ್ಳಾಲ ಕ್ಷೇತ್ರ ಧಾರ್ಮಿಕ, ಶೈಕ್ಷಣಿಕ ಮತ್ತು ಆರೋಗ್ಯದ ಮಾದರಿ ನಗರವಾಗಿ ಬೆಳೆಯಲಿ ಎಂದು ಆಶಿಸುತ್ತೇನೆ. ಇಂಡಿಯನ್ ಗ್ರ್ಯಾಂಡ್ ಮುಫ್ತಿಯವರು ಉಳ್ಳಾಲದ ಖಾಝಿ ಆಗಿರುವುದು ನಗರಕ್ಕೆ ಹೊಸ ಕಳೆ ತರಲಿದೆ ಎಂದು ತಿಳಿಸಿದ್ದಾರೆ.

Also Read  ಬ್ರಿಜ್ ಭೂಷಣ್ ಸಿಂಗ್ ಚುನಾವಣಾ ಕಣದಿಂದ ಹೊರಕ್ಕೆ

error: Content is protected !!
Scroll to Top