ಕಡಬ: ಕರ್ನಾಟಕ ರಾಜ್ಯ ಮಲಯಾಳಿ ಕ್ರಿಶ್ಚಿಯನ್ ಅಸೋಸಿಯೇಷನ್ ಇದರ ನೂತನ ಪದಾಧಿಕಾರಿಗಳ ಆಯ್ಕೆ ಅಧ್ಯಕ್ಷರಾಗಿ ಕ್ಸೇವಿಯರ್ ಬೇಬಿ, ಕಾರ್ಯದರ್ಶಿಯಾಗಿ ಜೋಮನ್ ಎಂ.ಜೆ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಜು. 09. ಕರ್ನಾಟಕ ರಾಜ್ಯ ಮಲಯಾಳಿ ಕ್ರಿಶ್ಚಿಯನ್ ಅಸೋಸಿಯೇಷನ್ ಇದರ ಕಡಬ ತಾಲೂಕು ಮಟ್ಟದ ವಾರ್ಷಿಕ ಸಭೆ ಹಾಗೂ ಚುನಾವಣೆಯು ಕಡಬ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಜೂನ್ 30 ರಂದು ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಮಲಯಾಳಿ ಕ್ರಿಶ್ಚಿಯನ್ ಅಸೋಸಿಯೇಷನ್ ರಾಜ್ಯಾಧ್ಯಕ್ಷರಾದ ಎ.ಸಿ ಜಯರಾಜ್ ಹಾಗು ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ಎ.ಸಿ.ವಿನಯರಾಜ್, ಮಲಯಾಳಿ ಕ್ರಿಶ್ಚಿಯನ್ ಅಸೋಸಿಯೇಷನ್ ಪದಾಧಿಕಾರಿಗಳಾದ ಎ.ಸಿ.ಮ್ಯಾಥ್ಯೂ ಸಾಬು ಉರುಂಬಿಲ್ ಭಾಗವಹಿಸಿ ಶುಭಹಾರೈಸಿದರು.


ಸಭೆಯಲ್ಲಿ ಕಡಬ ತಾಲೂಕು ಮಲಯಾಳಿ ಕ್ರಿಶ್ಚಿಯನ್ ಅಸೋಸಿಯೇಷನ್ ನ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಕಡಬ ತಾಲೂಕು ಘಟಕದ ಅಧ್ಯಕ್ಷರಾಗಿ ಕ್ಸೇವಿಯರ್ ಬೇಬಿ, ಉಪಾಧ್ಯಕ್ಷರಾಗಿ ಥೋಮಸ್ ಇಡಯಾಲ್, ಪ್ರಧಾನ ಕಾರ್ಯದರ್ಶಿಗಳಾಗಿ ಜೋಮನ್ ಎಂ.ಜೆ, ಜೊತೆ ಕಾರ್ಯದರ್ಶಿಯಾಗಿ ಬಿನೋಯ್ ಮ್ಯಾಥ್ಯೂ ಹಾಗೂ ಗೌರವಾಧ್ಯಕ್ಷರಾಗಿ ವರ್ಗೀಸ್ ಅಬ್ರಹಾಂ, ಕೋಶಾಧಿಕಾರಿಯಾಗಿ ಪಿ.ಪಿ ಎಲ್ಯಾಸ್, ಮಾಧ್ಯಮ ವಕ್ತಾರರಾಗಿ ಅನುಷ್ ಇವರುಗಳನ್ನು ಆಯ್ಕೆ ಮಾಡಲಾಯಿತು. ಕಡಬ ಮಲೆಯಾಳಿ ಅಸೋಸಿಯೇಷನ್ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಕೆ.ಟಿ ವಲ್ಸಮ್ಮ, ಉಪಾಧ್ಯಕ್ಷರಾಗಿ ಉಷಾ ಒ.ಕೆ, ಕಾರ್ಯದರ್ಶಿಗಳಾಗಿ ರೆಬೇಕಾ ಹಾಗೂ ಕೋಶಾಧಿಕಾರಿಗಳಾಗಿ ವಲ್ಸಮ್ಮಾ ಎ.ಜೆ ಇವರುಗಳನ್ನು ಆಯ್ಕೆ ಮಾಡಲಾಯಿತು. ಕಡಬ ತಾಲೂಕು ಘಟಕದ ಅಧ್ಯಕ್ಷರಾದ ಕ್ಸೇವಿಯರ್ ಬೇಬಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು ಹಾಗೂ ಥಾಮಸ್ ಇಡಯಲ್ ವಂದನಾರ್ಪಣೆಗೈದರು.

Also Read  ಸಬಳೂರು ರಾಣಿ ಅಬ್ಬಕ್ಕ ಜ್ಞಾನ ವಿಕಾಸ ಸಭೆ

error: Content is protected !!
Scroll to Top