ಉಳ್ಳಾಲದಿಂದ ಹೊರಟ ಖಾಝಿ ಅಸ್ಸೈಯದ್ ಫಝಲ್ ಕೋಯಮ್ಮ ತಂಙಳ್ ಜನಾಝ – ಕೆಲವೇ ಕ್ಷಣಗಳಲ್ಲಿ ಕಡಬ ತಾಲೂಕಿನ ಕೂರತ್ ಗೆ ಆಗಮನ

ಮಂಗಳೂರು, ಜು.8. ಉಳ್ಳಾಲ ಖಾಝಿ, ಮರ್ಹೂಂ ಶೈಖುನಾ ತಾಜುಲ್ ಉಲಮಾ ಅಸ್ಸೈಯದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ ತಂಙಳ್ ಅವರ ಪುತ್ರ ಅಸ್ಸೈಯದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ (ಕೂರತ್ ತಂಙಳ್) ಜು.8ರಂದು ಬೆಳಗ್ಗೆ ನಿಧನರಾಗಿದ್ದು, ಪಾರ್ಥಿವ ಶರೀರವು ಕೆಲವೇ ಕ್ಷಣಗಳಲ್ಲಿ ಕಡಬ ತಾಲೂಕಿನ ಕುದ್ಮಾರು ಕೂರತ್ ಗೆ ತಲುಪಲಿದೆ.

ಕೇರಳದ ಕಣ್ಣೂರು ಜಿಲ್ಲೆಯ ಎಟ್ಟಿಕ್ಕುಳಂನಲ್ಲಿರುವ ಮನೆಯಲ್ಲಿ ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಹೃದಯ ಸ್ತಂಭನದಿಂದ ತಂಙಳ್ ಕೊನೆಯುಸಿರೆಳೆದಿದ್ದು, ಪಾರ್ಥಿವ ಶರೀರವು ರಾತ್ರಿ 9 ಗಂಟೆ ಸುಮಾರಿಗೆ ಉಳ್ಳಾಲ ಜುಮಾ ಮಸೀದಿ ಮತ್ತು ಸೈಯದ್ ಮದನಿ ದರ್ಗಾ ವಠಾರಕ್ಕೆ ತಲುಪಿದೆ. 10.15 ಸುಮಾರಿಗೆ ಉಳ್ಳಾಲದಿಂದ ಹೊರಟಿದ್ದು, 11.30ರ ಸುಮಾರಿಗೆ ಕಡಬ ತಾಲೂಕಿನ ಕುದ್ಮಾರು ಸಮೀಪದ ಕೂರತ್ ಗೆ ತಲುಪಲಿದೆ.

Also Read  ಪ್ರಧಾನಿ ಆಗಸ್ಟ್‌ 21 ರಿಂದ 23ರವರೆಗೆ ಉಕ್ರೇನ್ ಗೆ ಭೇಟಿ     ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಹೇಳಿಕೆ

error: Content is protected !!
Scroll to Top