‘ನ್ಯೂಸ್ ಕಡಬ’ ವರದಿ ಫಲಶ್ರುತಿ ► ಕಡಬ ಬಸ್ ಸ್ಟಾಂಡ್ ಬಳಿಯ ಶೌಚಾಲಯ ಸಾರ್ವಜನಿಕ ಉಪಯೋಗಕ್ಕೆ ಲಭ್ಯ

(ನ್ಯೂಸ್ ಕಡಬ) newskadaba.com ಕಡಬ, ಫೆ.16. ಇಲ್ಲಿಯ ಪೇಟೆಯ ಬಸ್ ನಿಲ್ದಾಣದ ಬಳಿ ಗ್ರಾಮ ಪಂಚಾಯತ್ ವಾಣಿಜ್ಯ ಕಟ್ಟಡದ ಎದುರು ನಿರ್ಮಿಸಲಾಗಿದ್ದ ಶೌಚಾಲಯವು  ದುರಸ್ಥಿಯಲ್ಲಿದ್ದು ಸಾರ್ವಜನಿಕರ ಉಪಯೋಗಕ್ಕೆ ಕಳೆದ ಒಂದು ವಾರದಿಂದ ಅಡಚನೆ ಉಂಟಾಗಿದ್ದು ಗ್ರಾಮ ಪಂಚಾಯತ್ ತುರ್ತಾಗಿ ದುರಸ್ಥಿ ಕಾರ್ಯ ಕೈಗೊಂಡು ಫೆ.17 ರಿಂದ ಸಾರ್ವಜನಿಕ ಉಪಯೋಗಕ್ಕೆ ತೆರೆಯಲಾಗಿದೆ ಎಂದು ಕಡಬ ಗ್ರಾ.ಪಂ. ಅಧ್ಯಕ್ಷರಾದ ಬಾಬು ಮುಗೇರ ಹಾಗೂ ಪಿಡಿಒ ಚೆನ್ನಪ್ಪ ಗೌಡ ತಿಳಿಸಿದ್ದಾರೆ.

ಕಡಬ ಪೇಟೆಯಲ್ಲಿ ಸಾರ್ವಜನಿಕ ಶೌಚಾಲಯಕ್ಕೆ ಪೂರಕವಾದ ಸ್ಥಳಾವಕಾಶದ ಕೊರತೆಯಿದ್ದರೂ ಪೇಟೆಯಲ್ಲಿ ಇದ್ದ ಸ್ಥಳವನ್ನು ಹೊಂದಿಸಿಕೊಂಡು ಈಗಾಗಲೇ ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯವನ್ನು ನಿರ್ಮಿಸಲಾಗಿದ್ದು ಶೌಚಾಲಯದ ಶೌಚಗುಂಡಿ ತುಂಬಿದ್ದರಿಂದಾಗಿ ಕಳೆದ ಒಂದು ವಾರದಿಂದ ಶೌಚಾಲಯ ಸಾರ್ವಜನಿಕರ ಉಪಯೋಗಕ್ಕೆ ಅಡಚನೆ ಉಂಟಾಗಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳೂ ಬಂದಿದ್ದು, ತುರ್ತು ಕ್ರಮ ಕೈಗೊಂಡು ಕೂಡಲೇ ದುರಸ್ಥಿಗೊಳಿಸುವ ಮೂಲಕ ಸಾರ್ವಜನಿಕರಿಗೆ ಉಪಯೋಗಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ ಕಡಬ ಗ್ರಾ.ಪಂ.ಅಧ್ಯಕ್ಷರಾದ ಬಾಬು ಮುಗೇರವರು, ಸಾರ್ವಜನಿಕರು ಶೌಚಾಲಯದಲ್ಲಿ ಸರಿಯಾಗಿ ನೀರನ್ನು ಬಳಸುವುದರ ಮೂಲಕ ಸ್ವಚ್ಛತೆಯನ್ನು ಕಾಪಾಡುವುದರೊಂದಿಗೆ ಕಸ ಕಡ್ಡಿ ಹಾಕುವುದು, ಧೂಮಪಾನ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದಿದ್ದಾರೆ.

Also Read  ಸುಬ್ರಹ್ಮಣ್ಯ: ಬಸ್ ನಿಲ್ದಾಣದ ಬಳಿ ತಿರುಗಾಡುತ್ತಿದ್ದ ಅಪರಿಚಿತ ಮಹಿಳೆ ಮತ್ತು ಬಾಲಕಿಯನ್ನು ರಕ್ಷಣಾ ಕೇಂದ್ರಕ್ಕೆ ಕಳುಹಿಸಿದ ಪೊಲೀಸರು

error: Content is protected !!
Scroll to Top