ಗಂಡಿಬಾಗಿಲು ಮಸೀದಿಯಲ್ಲಿ ಜುಮಾ ನಮಾಜು ನಿರ್ವಹಿಸಿದ ಖ್ಯಾತ ಮಲಯಾಳಂ ನಟ ಮಮ್ಮುಟ್ಟಿ

(ನ್ಯೂಸ್ ಕಡಬ) newskadaba.com ಕಡಬ, ಫೆ.16. ‘ಮಾಮಾಂಗಂ’ ಮಲಯಾಳಂ ಚಿತ್ರದಲ್ಲಿ ನಟಿಸಲು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿರುವ ಖ್ಯಾತ ಚಿತ್ರನಟ ಮಮ್ಮುಟ್ಟಿ ಕೊಯಿಲದ ಗಂಡಿಬಾಗಿಲು ಖುತುಬಿಯ್ಯಾ ಜುಮ್ಮಾ ಮಸೀದಿಯಲ್ಲಿ ಶುಕ್ರವಾರದ ಜುಮಾ ನಮಾಜು ನಿರ್ವಹಿಸಿದರು.

ಕೊಯಿಲ ಫಾರ್ಮ್ ನಲ್ಲಿ ಕಳೆದ ಕೆಲವು ದಿನಗಳ ಹಿಂದೆ ಆರಂಭಗೊಂಡಿರುವ ಬಹುಕೋಟಿ ಬಜೆಟ್ ನಲ್ಲಿ ಸುಮಾರು 400 ವರ್ಷಗಳ ಹಿಂದಿನ ಕಥೆಯನ್ನು ಆಧರಿಸಿ ನಿರ್ಮಾಣಗೊಳ್ಳುತ್ತಿರುವ ‘ಮಾಮಾಂಗಂ’ ಚಿತ್ರದ ಚಿತ್ರೀಕರಣಕ್ಕಾಗಿ ಮಮ್ಮುಟ್ಟಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೊಯಿಲಕ್ಕೆ ಆಗಮಿಸಿದ್ದು, ಸುಬ್ರಹ್ಮಣ್ಯದಲ್ಲಿ ವಾಸ್ತವ್ಯ ಹೂಡುತ್ತಿದ್ದಾರೆ.

Also Read  ಮಂಗಳೂರು: ವಿಳಾಸ ಕೇಳುವ ನೆಪದಲ್ಲಿ ಚಿನ್ನದ ಸರ ಕಳವು

error: Content is protected !!
Scroll to Top