ಹಲವು ದಶಕಗಳ ಬೇಡಿಕೆಯಿಂದ ಕೊನೆಗೂ ಬಂತು ಕಡಬಕ್ಕೆ ತಾಲೂಕು ಭಾಗ್ಯ ► ಮಾ. 18 ರಂದು ಕಂದಾಯ ಸಚಿವರಿಂದ ನೂತನ ಕಡಬ ತಾಲೂಕು ಉದ್ಘಾಟನೆ

(ನ್ಯೂಸ್ ಕಡಬ) newskadaba.com ಕಡಬ, ಫೆ.16. ರಾಜ್ಯ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ನೂತನ ಕಡಬ ತಾಲೂಕನ್ನು ಅಧಿಕೃತವಾಗಿ ಉದ್ಘಾಟಿಸಲು ಮಾ. 18 ರಂದು ದಿನ ನಿಗದಿಯಾಗಿದ್ದು, ತಾಲೂಕು ಅನುಷ್ಠಾನದ ಕುರಿತು ಕಡಬ ಪರಿಸರದ ಜನರ ಮನಸ್ಸಿನಲ್ಲಿ ಮೂಡಿದ್ದ ಆತಂಕಗಳು ದೂರವಾಗಿದೆ.

ಫೆ. 14 ರಂದು ಬೈಂದೂರು, ಬ್ರಹ್ಮಾವರ ಹಾಗೂ ಕಾಪು ತಾಲೂಕುಗಳ ಉದ್ಘಾಟನೆಗೆ ಆಗಮಿಸಿದ್ದ ಕಂದಾಯ ಸಚಿವರನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ಸೂಚನೆಯಂತೆ ಭೇಟಿ ಮಾಡಿದ ಕಡಬ ಜಿ.ಪಂ. ಕ್ಷೇತ್ರದ ಸದಸ್ಯ ಪಿ.ಪಿ.ವಗರ್ೀಸ್ ಅವರ ನೇತೃತ್ವದ ನಿಯೋಗವು ಕಂದಾಯ ಸಚಿವರೊಂದಿಗೆ ಮಾತುಕತೆ ನಡೆಸಿ ಮಾ. 18 ರಂದು ತಾಲೂಕು ಉದ್ಘಾಟನೆಗೆ ದಿನಾಂಕ ಗೊತ್ತುಪಡಿಸಿದ್ದಾರೆ. ಅದೇ ದಿನ ಕಡಬ ಸಮುದಾಯ ಆಸ್ಪತ್ರೆಯ ನೂತನ ಕಟ್ಟಡ, ಹೊಸಮಠದ ನೂತನ ಸೇತುವೆ, ಕಡಬದಲ್ಲಿ ನೂತನವಾಗಿ ನಿಮರ್ಾಣಗೊಂಡಿರುವ ಮೆಸ್ಕಾಂ ಕಚೇರಿ ಕಟ್ಟಡ ಹಾಗೂ ನೆಟ್ಟಣದಲ್ಲಿ ಕಡಬ-ಸುಬ್ರಹ್ಮಣ್ಯ ರಾಜ್ಯರಸ್ತೆಯಲ್ಲಿ ನಿಮರ್ಾಣವಾಗುತ್ತಿರುವ ನೂತನ ಸೇತುವೆಯ ಉದ್ಘಾಟನೆಯೂ ನೆರವೇರಲಿದೆ ಎಂದು ಪಿ.ಪಿ.ವಗರ್ೀಸ್ ಅವರು ತಿಳಿಸಿದ್ದಾರೆ.

Also Read  ಕಡಬ: ಕೆಲಸಕ್ಕೆಂದು ತೆರಳಿದ ಯುವಕ ನಾಪತ್ತೆ

ಕಳೆದ ಸರಕಾರದ ಆಡಳಿತಾವಧಿಯ ಕೊನೆಯಲ್ಲಿ ಮುಖ್ಯಮಂತ್ರಿಯಾಗಿದ್ದ ಜಗದೀಶ್ ಶೆಟ್ಟರ್ ಅವರಿಂದ ಘೋಷಣೆಯಾಗಿದ್ದ ಕಡಬ ನೂತನ ತಾಲೂಕು ಬಳಿಕ ಅನುಷ್ಠಾನವಾಗದೇ ಇದ್ದುದರಿಂದ ಭ್ರಮನಿರಸನಗೊಂಡಿದ್ದ ಕಡಬದ ಜನತೆ ಬಳಿಕ ಸಿದ್ಧರಾಮಯ್ಯ ನೇತೃತ್ವದ ಸರಕಾರವೂ ಈ ಕುರಿತು ಗಮನಹರಿಸದೇ ಇದ್ದಾಗ ತೀವ್ರ ಅಸಮಾಧಾನಗೊಂಡಿದ್ದರು. ಇತ್ತೀಚೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕಡಬ ತಾಲೂಕನ್ನು ಮತ್ತೆ ಘೋಷಣೆ ಮಾಡಿದಾಗಲೂ ಜನರಲ್ಲಿ ಹಿಂದಿನ ಉತ್ಸಾಹ ಕಂಡುಬಂದಿರಲಿಲ್ಲ. ಫೆ. 14 ರಂದು ಬೈಂದೂರು, ಬ್ರಹ್ಮಾವರ ಹಾಗೂ ಕಾಪು ತಾಲೂಕುಗಳ ಉದ್ಘಾಟನೆ ನಡೆದಾಗ ಕಡಬದ ಜನರಲ್ಲಿ ಮತ್ತೆ ಆತಂಕ ಆರಂಭವಾಗಿತ್ತು. ಈ ಬಾರಿಯೂ ಕಡಬ ತಾಲೂಕು ಅನುಷ್ಠಾನ ಕನಸಾಗಿಯೇ ಉಳಿಯಲಿದೆಯೇ ಎನ್ನುವ ಭೀತಿಯಲ್ಲಿರುವ ಜನರಿಗೆ ತಾಲೂಕು ಉದ್ಘಾಟನೆಯ ಸುದ್ದಿ ಖುಷಿ ತರಲಿದೆ.

Also Read  ಇಂಡಿಯನ್ ಎಕ್ಸಲೆನ್ಸಿ ರಾಷ್ಟ್ರಪ್ರಶಸ್ತಿಗೆ ಕಡಬದ ದಿಲೀಪ್ ಆಯ್ಕೆ

error: Content is protected !!
Scroll to Top