ಬೆಳಂದೂರು ಕಾಲೇಜು ಹೋರಾಟಗಾರ ಸಿ.ಪಿ. ಜಯರಾಮ ಗೌಡ ಇನ್ನಿಲ್ಲ

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ.28. ಪುತ್ತೂರು ತಾಲೂಕು ಚಾರ್ವಾಕ ಗ್ರಾಮದ ಅರುವ ನಿವಾಸಿ ಸಿ.ಪಿ.ಜಯರಾಮ ಗೌಡರು ಬುಧವಾರದಂದು ಅಲ್ಪಕಾಲದ ಅಸೌಖ್ಯದಿಂದಾಗಿ ಬೆಂಗಳೂರಿನ ರಾಮಯ್ಯ ಆಸ್ಪತ್ರೆಯಲ್ಲಿ ನಿಧನರಾದರು. ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷರಾಗಿದ್ದು, ಬೆಳಂದೂರು ಪ್ರಥಮ ದರ್ಜೆ ಕಾಲೇಜಿನ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪುತ್ತೂರು ಶ್ರೀ ಮಹಾಲಿಂಗೇಶ್ವರ ಐಟಿಐಯ ಸಂಚಾಲಕರೂ, ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಮಿತಿಯ ಸಲಹಾ ಸಮಿತಿಯ ಸದಸ್ಯರೂ ಆಗಿರುವ ಸಿ.ಪಿ.ಜಯರಾಮ ಗೌಡರು ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಸಕ್ರೀಯರಾಗಿದ್ದರು. ಮೃತರು ಪತ್ನಿ ಚಂದ್ರಕಲಾ, ಪುತ್ರಿ ವಚನರವರನ್ನು ಅಗಲಿದ್ದಾರೆ.

Also Read  ಅಬಕಾರಿ ಕಾರ್ಯಾಚರಣೆ: ಮದ್ಯ, ಗಾಂಜಾ ವಶ

ನಾಳೆ ಅಂತ್ಯ ಸಂಸ್ಕಾರ
ಸಿ.ಪಿ.ಜಯರಾಮ ಗೌಡ ಪಾರ್ತಿವ ಶರೀರವನ್ನು ಜೂ.28 ರ ರಾತ್ರಿ ಪುತ್ತೂರಿಗೆ ತಂದು ಜೂ. 29 ರಂದು ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಕುಟುಂಬ ಮೂಲದಿಂದ ತಿಳಿದುಬಂದಿದೆ.

error: Content is protected !!
Scroll to Top