Breaking | ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ಪೆನ್ ಡ್ರೈವ್ ಪ್ರಕರಣ – ಮಧ್ಯರಾತ್ರಿ ಬೆಂಗಳೂರಿಗೆ ಬಂದಿಳಿದ ಪ್ರಜ್ವಲ್ ಎಸ್ಐಟಿ ವಶಕ್ಕೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.31. ಲೈಂಗಿಕ ದೌರ್ಜನ್ಯ ಹಗರಣ ಪ್ರಕರಣದಲ್ಲಿ ಕಳೆದ 33 ದಿನಗಳಿಂದ ತಲೆಮರೆಸಿಕೊಂಡಿದ್ದ ಹಾಸನ ಸಂಸದ ಪ್ರಜ್ವಲ್​ ರೇವಣ್ಣ ಕೊನೆಗೂ ಬೆಂಗಳೂರಿಗೆ ಆಗಮಿಸಿದ್ದು, ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಪ್ರಜ್ವಲ್ ರೇವಣ್ಣ ಲುಫ್ತಾನ್ಸಾ LH764 ವಿಮಾನದ ಮೂಲಕ ಜರ್ಮನಿಯ ಮ್ಯೂನಿಕ್‌ ಏರ್‌ಪೋರ್ಟ್‌ನಿಂದ ಬ್ಯುಸಿನೆಸ್​​ ಕ್ಲಾಸ್​​ ನಲ್ಲಿ ಬೆಂಗಳೂರಿಗೆ ಬಂದಿಳಿದಿದ್ದಾರೆ. ಮಧ್ಯರಾತ್ರಿ ಕೆಂಪೇಗೌಡ ಏರ್‌ಪೋರ್ಟ್‌ಗೆ ಆಗಮಿಸಿದ ಪ್ರಜ್ವಲ್ ನನ್ನು ಎಸ್ಐಟಿ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಇತ್ತೀಚೆಗೆ ಬೆಂಗಳೂರಿಗೆ ಬರುವುದಾಗಿ ಪ್ರಜ್ವಲ್​ ವಿಡಿಯೋ ಬಿಡುಗಡೆ ಮಾಡಿದ್ದರಾದರೂ ಆತ ಎಲ್ಲಿಂದ ವಿಡಿಯೋ ಮಾಡಿರುವುದು ಎನ್ನುವುದು ಗೊತ್ತಾಗಿರಲಿಲ್ಲ. ಬಳಿಕ ಎಸ್​ಐಟಿ ಅಧಿಕಾರಿಗಳು ಐಪಿ ಅಡ್ರೆಸ್ ಪತ್ತೆಹಚ್ಚಿದಾಗ ಯೂರೋಪ್​​ನ ಹಂಗೇರಿಯಿಂದ ವಿಡಿಯೋ ಮಾಡಿದ್ದಾಗಿ ತಿಳಿದುಬಂದಿತ್ತು.

error: Content is protected !!
Scroll to Top