ಆಲಂಕಾರು: ಮನೆಯಿಂದ ಹೊರಹೋದ ವ್ಯಕ್ತಿ ನಾಪತ್ತೆ

(ನ್ಯೂಸ್ ಕಡಬ) newskadaba.com‌ ಕಡಬ, ಫೆ.15. ಠಾಣಾ ವ್ಯಾಪ್ತಿಯ ಆಲಂಕಾರು ಗ್ರಾಮದ ಪಟ್ಟೆ ಮಜಲು ನಿವಾಸಿ ಶೀನಪ್ಪ ಪೂಜಾರಿ ಎಂಬವರ ಪುತ್ರ ರಾಜೀವ ಪೂಜಾರಿ (42) ಎಂಬವರು ಮನೆಯಿಂದ ಹೊರ ಹೋದವರು ಹಿಂತಿರುಗಿ ಬಾರದೆ ಕಾಣೆಯಾಗಿದ್ದಾರೆ ಎಂದು ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

ಇತ್ತೀಚೆಗೆ ಕಲ ಸಮಯದಿಂದ ಮಾನಸಿಕವಾಗಿ ವರ್ತಿಸುತ್ತಿದ್ದ ರಾಜೀವ್ ಪೂಜಾರಿ, ಆಗಾಗ ಕೆಲವು ಬಾರಿ ಮನೆ ಬಿಟ್ಟು ಹೋಗಿ ಬರುತ್ತಿದ್ದರು. ಫೆಬ್ರವರಿ 07 ರಂದು ಮತ್ತೊಮ್ಮೆ ಮನೆ ಬಿಟ್ಟು ಹೋದವರು ವಾಪಾಸು ಮನೆಗೆ ಬಾರದೇ ಕಾಣೆಯಾಗಿದ್ದು, ವಿವಿಧೆಡೆ ಹುಡುಕಾಡಿದರೂ ಈವರೆಗೆ ಪತ್ತೆಯಾಗಿರುವುದಿಲ್ಲ ಎಂದು ರಾಜೀವ್ ಪೂಜಾರಿಯವರ ತಂದೆ ಶೀನಪ್ಪ ಪೂಜಾರಿ ಕಡಬ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಆರ್ಡರ್ ಡೆಲಿವರಿಯಾಗದ ಹಿನ್ನೆಲೆ ➤ ಫ್ಲಿಪ್ ಕಾರ್ಟ್ ಕಸ್ಟಮರ್ ಕೇರ್ ಎಂದು ಭಾವಿಸಿ ಕರೆಮಾಡಿ 48 ಸಾವಿರ ಕಳೆದುಕೊಂಡ ನಗರದ ವ್ಯಕ್ತಿ..!!

error: Content is protected !!
Scroll to Top