ಇಂದು (ಮೇ.19) ಬೆಳಿಗ್ಗೆಯಿಂದ ಸಂಜೆಯವರೆಗೆ ಬೆತ್ತೋಡಿ ಮಖಾಂ ಉರೂಸ್ ಸಮಾರಂಭ

(ನ್ಯೂಸ್ ಕಡಬ) newskadaba.com ಕಡಬ, ಮೇ.19. ಮರ್ಧಾಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿರುವ ಬೆತ್ತೋಡಿ ಮಖಾಂ ಉರೂಸ್ ಇಂದು ಬೆಳಿಗ್ಗೆ 9 ರಿಂದ ಆರಂಭಗೊಂಡು ಸಂಜೆ 4.30ರ ವರೆಗೆ ನಡೆಯಲಿದೆ.

ಜಾತಿ ಮತ ಭೇದವಿಲ್ಲದೆ ಹಲವಾರು ಕಷ್ಟ ಕಾರ್ಪಣ್ಯಗಳಿಗೆ ಹೆಸರುವಾಸಿಯಾದ ಬೆತ್ತೋಡಿಯಲ್ಲಿ ಲುಹರ್ ನಮಾಝ್ ನ ಬಳಿಕ ಮರ್ಧಾಳ ಬದ್ರಿಯಾ ಜುಮಾ‌ ಮಸೀದಿಯ ಖತೀಬರಾದ ಹನೀಫ್ ಸಖಾಫಿಯವರ ನೇತೃತ್ವದಲ್ಲಿ ಮೌಲೀದ್ ಪಾರಾಯಣ ನಡೆಯಲಿದ್ದು, ಝೈನುಲ್ ಆಬಿದೀನ್ ತಂಙಳ್ ಎಣ್ಮೂರು ದುವಾ ನೆರವೇರಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top