ಈ ಸಲ ಕಪ್ ನಮ್ದೇ ಅಂತ CSK ಗೆ ಚಿಪ್ಪು ಕೊಟ್ಟು ದಾಖಲೆ ಬರೆದ RCB – ಚೆನ್ನೈಯನ್ನು ಮಣಿಸಿ ಪ್ಲೇ ಆಫ್ ಆಗಿ ಮೂಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.19. ಈ ಸಲ ಕಪ್‌ ನಮ್ದೇ ಅಂತ ಸ್ಲೋಗನ್ ಗೆ ಸೀಮಿತವಾಗಿ ಚಿಪ್ಪು ಪಡೆಯುತ್ತಾ ಪ್ರತೀ ಬಾರಿ ಟ್ರೋಲ್ ಗೆ ಒಳಗಾಗುತ್ತಿರುವ ಆರ್‌ಸಿಬಿ ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ನ್ನು ಮಣಿಸುವ ಮೂಲಕ ಹೊಸ ದಾಖಲೆ ಬರೆದಿದೆ.

ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ ಪದ್ಯದಲ್ಲಿ ಚೆನ್ನೈ ವಿರುದ್ಧ ಆರ್‌ಸಿಬಿ 27 ರನ್‌ಗಳ ಗೆಲುವು ದಾಖಲಿಸಿತು. ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆರ್‌ಸಿಬಿ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 219 ರನ್ ಗಳ ಗುರಿಯನ್ನು ನೆಟ್ಟಿತ್ತು. ಕೊನೆಯ ಕ್ಷಣದವರೆಗೂ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಮಣಿಸಿ ಪ್ಲೇ ಆಫ್ ಆಗಿ ಮೂಡಿ ಬಂತು. ಇಂದಿನ ಪಂದ್ಯವನ್ನು ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ತೆರಳಿ ವೀಕ್ಷಿಸಿದ್ದರು. ಬೆಂಗಳೂರಿನಲ್ಲಿ ತಡರಾತ್ರಿ ರಸ್ತೆಗಿಳಿದಿರುವ ಅಭಿಮಾನಿಗಳು, ಪಟಾಕಿಗಳನ್ನು ಸಿಡಿಸುವ ಮೂಲಕ ಕಪ್ ಗೆದ್ದಷ್ಟೇ ಸಂಭ್ರಮಾಚರಣೆ ನಡೆಸಿದರು‌. ದೇಶ ವಿದೇಶಗಳಲ್ಲಿ ಆರ್‌ಸಿಬಿ ಅಭಿಮಾನಿಗಳು ಸಂಭ್ರಮಿಸಿದ್ದು, ಈ ಸಲ ಕಪ್‌ ನಮ್ದೇ ಎನ್ನುವ ಸ್ಲೋಗನ್ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ.

Also Read  ಗಂಡು ಮಗುವಿಗೆ ಜನನ ನೀಡಿದ ಅಭಿಷೇಕ್ ಅಂಬರೀಶ್‌ ಪತ್ನಿ ಅವಿವಾ

error: Content is protected !!
Scroll to Top