ಕಡಬ: ರಬ್ಬರ್ ಸ್ಮೋಕ್ ಹೌಸ್ ಬೆಂಕಿಗಾಹುತಿ – ಲಕ್ಷಾಂತರ ರೂ. ಮೌಲ್ಯದ ಅಡಿಕೆ, ರಬ್ಬರ್ ಸುಟ್ಟು ಕರಕಲು

(ನ್ಯೂಸ್ ಕಡಬ) newskadaba.com ಕಡಬ, ಮೇ.09. ರಬ್ಬರ್ ಸ್ಮೋಕ್ ಹೌಸ್ ಗೆ ಬೆಂಕಿ ತಗುಲಿದ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ಅಡಿಕೆ, ರಬ್ಬರ್ ಬೆಂಕಿಗಾಹುತಿಯಾದ ಘಟನೆ ಕಡಬ ತಾಲೂಕಿನ ಕೊಣಾಜೆ ಗ್ರಾಮದ ಮಾಳ ಎಂಬಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಮಾಳ ನಿವಾಸಿ ಸ್ಯಾಮುವೆಲ್ ಎಂಬವರಿಗೆ ಸೇರಿದ ತಾರಸಿ ಮನೆಯ ಮೇಲಿನ ಮಹಡಿಯಲ್ಲಿ ರಬ್ಬರ್ ಒಣಗಿಸಲು ಸ್ಮೋಕ್ ಹೌಸ್ ನಿರ್ಮಿಸಲಾಗಿತ್ತು. ಅದರ ಪಕ್ಕದಲ್ಲೇ ಸುಮಾರು 10 ಕ್ವಿಂಟಾಲ್ ಗೂ ಅಧಿಕ ಒಣಗಿದ ಅಡಿಕೆ, ಅಪಾರ ಪ್ರಮಾಣದ ರಬ್ಬರ್ ಶೇಕರಣೆ ಮಾಡಲಾಗಿದ್ದು, ಮಂಗಳವಾರ ರಾತ್ರಿ ಏಕಾಏಕಿ ಬೆಂಕಿಗಾಹುತಿಯಾಗಿದೆ. ತಕ್ಷಣವೇ ಸ್ಥಳೀಯರು ಸೇರಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಲ್ಲಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

Also Read  ದ.ಕ ಜಿಲ್ಲೆಯಲ್ಲಿ ಜರುಗುವ ಹಬ್ಬ ಹರಿದಿನಗಳಲ್ಲಿ ➤ ಪ್ರಾಣಿ ಬಲಿ - ನಿಷೇಧ

error: Content is protected !!
Scroll to Top