ಕಡಬ, ಮೇ.07. ಪ್ರಪಂಚವನ್ನು ಕಾಣಲು ಸಾಧ್ಯವಾಗದೇ ಇರುವ ಅಂಧತ್ವ ಎನ್ನುವುದು ಮನುಷ್ಯನ ಬದುಕಿನಲ್ಲಿ ಅತ್ಯಂತ ನೋವಿನ ವಿಚಾರವಾಗಿದೆ. ಅಂತಹ ಅಂಧತ್ವವನ್ನು ನಿವಾರಿಸಿ ನೊಂದವರ ಬದುಕಿಗೆ ಹೊಸ ಬೆಳಕನ್ನು ನೀಡುವ ನಿಟ್ಟಿನಲ್ಲಿ ಶ್ರಮಿಸುವುದು ಪುಣ್ಯದ ಕಾರ್ಯ ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ಅಭಿಪ್ರಾಯಪಟ್ಟರು.
ಅವರು ಕಡಬದ ಸರಕಾರಿ ಆಸ್ಪತ್ರೆಯ ಎದುರು ಪಂಜ
ರಸ್ತೆಯಲ್ಲಿರುವ ಸಿ.ಎ. ಬ್ಯಾಂಕಿನ ಯೋಗಕ್ಷೇಮ ಸಂಕೀರ್ಣದ ಮೊದಲನೇ ಮಹಡಿಯಲ್ಲಿ ಕಣ್ಣಿನ ಚಿಕಿತ್ಸೆಯಲ್ಲಿ ಅತ್ಯಾಧುನಿಕ ಉಪಕರಣಗಳು ಮತ್ತು ವ್ಯವಸ್ಥೆಗಳನ್ನು ಹೊಂದಿರುವ ಅಶ್ವಿನಿ ಕಣ್ಣಿನ ಚಿಕಿತ್ಸಾಲಯ ಮತ್ತು ಆಪ್ಟಿಕಲ್ಸ್ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿದರು. ತಾಲೂಕು ಕೇಂದ್ರವಾಗಿ ಬೆಳೆಯುತ್ತಿರುವ ಕಡಬದಲ್ಲಿ ಈ ರೀತಿಯ ತಜ್ಞ ವೈದ್ಯರ ಸೇವೆಯೊಂದಿಗೆ ಕಣ್ಣಿನ ಚಿಕಿತ್ಸಾಲಯ ಮತ್ತು ಆಪ್ಟಿಕಲ್ ಸೇವೆಯ ಅಗತ್ಯತೆಯನ್ನು ಮನಗಂಡು ಅದನ್ನು ಕಾರ್ಯರೂಪಕ್ಕೆ
ತಂದಿರುವ ಶಾಂತರಾಜ್ ಮತ್ತು ಅವರ ಬಳಗದ ಸೇವೆ ಶ್ಲಾಘನಾರ್ಹ ಎಂದವರು ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಕಡಬ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ|ತ್ರಿಮೂರ್ತಿ ವಿ.ಕೆ. ಅವರು ಮಾತನಾಡಿ, ಕಡಬ ಪಟ್ಟಣವು ವೈದ್ಯಕೀಯ ಸೇವಾ ಕ್ಷೇತ್ರದಲ್ಲಿ ಈಗಷ್ಟೇ ಅಭಿವೃದ್ಧಿಯನ್ನು ಹೊಂದುತ್ತಿದೆ. ಅಶ್ವಿನಿ ಕಣ್ಣಿನ ಚಿಕಿತ್ಸಾಲಯ ಮತ್ತು ಆಪ್ಟಿಕಲ್ ಸಂಸ್ಥೆಯು ಸಕಾಲಿಕವಾಗಿ ತನ್ನ ಸೇವೆಯನ್ನು ಆರಂಭಿಸುವ
ಮೂಲಕ ಜನರಿಗೆ ಅನುಕೂಲವಾಗಲಿದೆ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಪುತ್ತೂರಿನ ಆನಂದಾಶ್ರಮ ಸೇವಾ ಟ್ರಸ್ಟ್‌ನ ಮುಖ್ಯಸ್ಥೆ ಡಾ| ಗೌರಿ ಪೈ ಅವರು ಅಂಧತ್ವ ನಿವಾರಣೆಯ ನಿಟ್ಟಿನಲ್ಲಿ ನಮ್ಮ ಆನಂದಾಶ್ರಮ ಸೇವಾ ಟ್ರಸ್ಟ್
ಹಲವು ವರ್ಷಗಳಿಂದ ನಿರಂತರವಾಗಿ ಶಿಬಿರಗಳನ್ನು ಹಮ್ಮಿಕೊಂಡು ಬರುವ ಮೂಲಕ ನಮ್ಮದೇ ಆದ ಸೇವೆಯನ್ನು ನೀಡುತ್ತಿದೆ. ನಮ್ಮ ಈ ಸೇವಾ ಕಾರ್ಯದಲ್ಲಿ ನೇತ್ರಾಧಿಕಾರಿ ಶಾಂತರಾಜ್ ಅವರ ಸಹಕಾರ
ಅಮೂಲ್ಯವಾದುದು. ಅವರು ತನ್ನ ಸರಕಾರಿ ಸೇವೆಯ ನಿವೃತ್ತಿಯ ಬಳಿಕವೂ ಅಂಧತ್ವ ನಿವಾರಣೆಯ
ಸೇವಾ ಕಾರ್ಯದಲ್ಲಿ ಮುಂದುವರೆಯುವ ಸಲುವಾಗಿ
ಆರಂಭಿಸಿರುವ ಅಶ್ವಿನಿ ಕಣ್ಣಿನ ಚಿಕಿತ್ಸಾಲಯ
ಮತ್ತು ಆಪ್ಟಿಕಲ್ ನಲ್ಲಿ ಜನರಿಗೆ ಉತ್ತಮ
ಸೇವೆ ಲಭಿಸಲಿ. ಸಂಸ್ಥೆಯೂ ಅಭಿವೃದ್ಧಿಯ
ಪಥದಲ್ಲಿ ಮುನ್ನಡೆಯಲಿ ಎಂದು ಹಾರೈಸಿದರು.
ಸಂಸ್ಥೆಯ ಮುಖ್ಯಸ್ಥ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನೇತ್ರಾಧಿಕಾರಿ ಎ. ಶಾಂತರಾಜ್ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ನೇತ್ರ ತಜ್ಞ ವೈದ್ಯರ ಸೇವೆಯೊಂದಿಗೆ ಜಪಾನ್ ನಿರ್ಮಿತ ಕಂಪ್ಯೂಟರೀಕೃತ ಕಣ್ಣಿನ ಪರೀಕ್ಷೆ, ದೃಷ್ಟಿ ದೋಷಕ್ಕಾಗಿ ಪ್ಲಾಸ್ಟಿಕ್ ಸರ್ಜರಿ, ಪೊರೆ ಅಂಧತ್ವ ನಿವಾರಣೆಗಾಗಿ ಜಗತ್ತಿನ ಅತ್ಯಾಧು ನಿಕ ತಂತ್ರಜ್ಞಾನದ ಕಂಪ್ಯೂಟರೀಕೃತ ಶಸ್ತ್ರಚಿಕಿತ್ಸೆ,
ಕಾಂಟ್ಯಾಕ್ಟ್ ಲೆನ್ಸ್, ನವನವೀನ ಮಾದರಿಯ
ಉತ್ತಮ ಗುಣಮಟ್ಟದ ಕನ್ನಡಕಗಳು ಅತ್ಯಂತ
ಯೋಗ್ಯ ಮತ್ತು ಕೈಗೆಟಕುವ ದರದಲ್ಲಿ ನಮ್ಮಲ್ಲಿ ಲಭಿಸಲಿದೆ. ಬಿಪಿಎಲ್ ಕಾರ್ಡುದಾರರಿಗೆ ಉಚಿತ ಸೇವಾ ಸೌಲಭ್ಯವಿದೆ ಎಂದರು.
ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಯ್ಯದ್ ಮೀರಾ
ಸಾಹೇಬ್ ಅವರು ಶುಭಹಾರೈಸಿ ದರು. ಮಂಜುಳಾ ಶಾಂತರಾಜ್, ನೇತ್ರ ತಜ್ಞ ಡಾ|ಅಶ್ವಿನಿ ಸಾಗರ್, ಸಂಸ್ಥೆಯ ಆಡಳಿತ ವೈದ್ಯ ಡಾ|ವಿಕಾಸ್, ಬೆಳ್ತಂಗಡಿಯ ವಿಕಾಸ್ ಆಪ್ಟಿಕಲ್ ನ ಜಯರಾಮ್, ಆಪ್ಟೋ ಮೆಟ್ರಿಸ್ಟ್ ಕಾರ್ತಿಕ್, ಯಶಸ್ವಿ, ದೇರಳಕಟ್ಟೆ ಯೆನೆಪೋಯ ಆಸ್ಪತ್ರೆಯ ಡಾ|ದೀಕ್ಷಾ, ಡಾ|ಚಂದನಾ, ಮಿಥಿಲಾ, ಸಾಜನ್
ಪುತ್ತೂರು ಮುಂತಾದವರು ಉಪಸ್ಥಿತರಿದ್ದರು.