ಪಂಜ: ಪತ್ನಿಯ ಮೇಲೆಯೇ ತನ್ನ ಸ್ನೇಹಿತನನ್ನು ಅತ್ಯಾಚಾರವೆಸಗಲು ಕುಮ್ಮಕ್ಕು ► ಆರೋಪಿಗಳಿಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಫೆ.15. ತನ್ನ ಪತ್ನಿಯ ಮೇಲೆಯೇ ತನ್ನ ಸ್ನೇಹಿತನನ್ನು ಅತ್ಯಾಚಾರವೆಸಗಲು ಕುಮ್ಮಕ್ಕು ನೀಡಿದ ಆರೋಪದಲ್ಲಿ ಆರೋಪಿಗಳಿಬ್ಬರನ್ನು ಬಂಧಿಸಿದ ಘಟನೆ ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಕೂತ್ಕುಂಜ ಎಂಬಲ್ಲಿ ಬುಧವಾರದಂದು ನಡೆದಿದೆ.

ಫೆಬ್ರವರಿ 12 ಸೋಮವಾರದಂದು ರಾತ್ರಿ ತನ್ನ ಪತಿ ತಿರುಮಲೇಶ್ ಎಂಬಾತನ ಕುಮ್ಮಕ್ಕಿನಿಂದ ಆತನ ಸ್ನೇಹಿತ ಶಶಿಕುಮಾರ್ ಎಂಬಾತ ಅತ್ಯಾಚಾರವೆಸಗಿದ್ದಾಗಿ ಸುಳ್ಯ ತಾಲೂಕಿನ ಕೂತ್ಕುಂಜ ಗ್ರಾಮದ ಪುತ್ಯ ನಿವಾಸಿ ಮಹಿಳೆಯೋರ್ವರು ಸುಬ್ರಹ್ಮಣ್ಯ ಠಾಣೆಗೆ ಬುಧವಾರದಂದು ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ಎಸ್ಐ ಗೋಪಾಲ್ ಹಾಗೂ ಸಿಬ್ಬಂದಿಗಳು ಆರೋಪಿಗಳಿಬ್ಬರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!
Scroll to Top