ಕಡಬಕ್ಕೆ ಆಗಮಿಸಿದ ಮಲಯಾಳಂ ಸಿನಿಮಾ ತಾರೆಯರ ದಂಡು ► ಮೋಹನ್ ಲಾಲ್, ಮಮ್ಮುಟ್ಟಿ, ನಿವಿನ್ ಪೋಲಿ ಜೊತೆ‌ ಸೆಲ್ಫಿಗಾಗಿ ಮುಗಿಬೀಳುತ್ತಿರುವ ಅಭಿಮಾನಿಗಳು

(ನ್ಯೂಸ್ ಕಡಬ) newskadaba.com ಕಡಬ, ಫೆ.14. ಕೇರಳದ ಸಿನಿಮಾ ನಾಯಕರ ದಂಡು ಇದೀಗ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ್ದು, ಪ್ರಸಿದ್ಧ ಸಿನಿಮಾ ನಟರಾದ ಮೋಹನ್ ಲಾಲ್, ಮಮ್ಮುಟ್ಟಿ ಹಾಗೂ ನಿವಿನ್ ಪೋಲಿ, ಸಿನಿಮಾ ನಟಿ ಪ್ರಿಯಾ ಆನಂದ್ ಸೇರಿದಂತೆ ಚಿತ್ರ ತಂಡದ ದಿಗ್ಗಜರು ಎರಡು ವಿಭಿನ್ನ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.

ರೋಷನ್ ಆಂಡ್ರೋಸ್ ನಿರ್ದೇಶನದಲ್ಲಿ
ಮಲೆಯಾಳಂ ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ‘ಕಾಯಂಕುಳಂ ಕೊಚ್ಚುನ್ನಿ’ ಚಿತ್ರದಲ್ಲಿ ನಾಯಕನಾಗಿ ನಿವಿನ್ ಪೋಲಿ, ನಾಯಕಿಯಾಗಿ ಪ್ರಿಯಾ ಆನಂದ್ ಹಾಗೂ ಅತಿಥಿ ನಟನಾಗಿ ಮೋಹನ್ ಲಾಲ್ ನಟಿಸುತ್ತಿದ್ದಾರೆ. ಚಿತ್ರೀಕರಣವನ್ನು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಬಲ್ಯ ಹಾಗೂ ಪದವು ಪರಿಸರದಲ್ಲಿ ನಡೆಸಲಾಗುತ್ತಿದ್ದು, ಕ್ಯಾಮೆರಾಮೆನ್ ಆಗಿ ವಿನೋದ್ ಪ್ರಧಾನ್ ಕಾರ್ಯನಿರ್ವಹಿಸುತ್ತಿದ್ದಾರೆ.

Also Read  ಉಳಿಪ್ಪು ರಸ್ತೆ ದುರಸ್ತಿ ವಿಚಾರದಲ್ಲಿ ➤ ಪಂಚಾಯತ್ ವಿರುದ್ದ ಪ್ರತಿಭಟನೆ

ಇನ್ನೊಂದೆಡೆ ಬಹುಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವ ಮಲಯಾಳಂ ಪ್ರಸಿದ್ಧ ನಟ ಮಮ್ಮುಟ್ಟಿ ಅಭಿನಯದ ‘ಮಾಮಾಂಗಂ’ ಚಿತ್ರದ ಚಿತ್ರೀಕರಣವನ್ನು ಕೊಯಿಲ ಫಾರ್ಮ್ ನಲ್ಲಿ ನಡೆಸಲಾಗುತ್ತಿದ್ದು, ಎಲ್ಲಾ ಪ್ರಸಿದ್ಧ ನಟರ ವಾಸ್ತವ್ಯಕ್ಕಾಗಿ ಕುಕ್ಕೇ ಸುಬ್ರಹ್ಮಣ್ಯದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಕಡಬ ತಾಲೂಕಿನ ಎರಡೂ ಕಡೆಗಳಲ್ಲಿ ಏಕಕಾಲದಲ್ಲಿ ಪ್ರಸಿದ್ಧ ನಟರ ಸಿನಿಮಾಗಳ ಚಿತ್ರೀಕರಣಗೊಳ್ಳುತ್ತಿರುವುದು ಪ್ರಸಿದ್ಧ ನಟರ ಅಭಿಮಾನಿಗಳಿಗೆ ಸಂತಸವನ್ನುಂಟುಮಾಡಿದ್ದು, ಅಭಿಮಾನಿಗಳು ಸಾಲುಸಾಲಾಗಿ ಸೆಲ್ಫಿಗಾಗಿ ಮುಗಿಬೀಳುತ್ತಿದ್ದಾರೆ.

error: Content is protected !!
Scroll to Top