2017 ಇಸವಿಯ ಬದಲು 2012 ಇಸವಿಯ ರಶೀದಿ ನೀಡಿದ ಪೊಲೀಸರು

(ನ್ಯೂಸ್ ಕಡಬ) newskadaba.com ಕಡಬ, ಜೂ.26. ವಾಹನಗಳನ್ನು ತಪಾಸಣೆ ನಡೆಸಿ ದಂಡ ವಿಧಿಸುವ ವೇಳೆ ಕಡಬ ಪೊಲೀಸರು 2017ನೇ ಇಸವಿಯ ಬದಲು 2012ನೇ ಇಸವಿಯ ರಶೀದಿಗಳನ್ನು ನೀಡುತ್ತಿದ್ದಾರೆ ಎಂದು ದಂಡ ಹಾಕಿಸಿಕೊಂಡಿರುವ ವಾಹನ ಚಾಲಕರು ಆರೋಪಿಸಿದ್ದಾರೆ. ಕಡಬ ಪೊಲೀಸರು ಜೂ.26 ರಂದು ಕಡಬ ಪೇಟೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ದಾಖಲೆ ಪತ್ರ ಸರಿ ಇಲ್ಲದ ಹಾಗೂ ಹೆಲ್ಮೆಟ್ ಧರಿಸದ ದ್ವಿಚಕ್ರ ಸವಾರರಿಗೆ ದಂಡ ವಿಧಿಸಿದ್ದರು. ಈ ವೇಳೆ 26.06.2017 ಎಂದು ನಮೂದಿಸುವ ಬದಲು 26.06.2012 ಎಂದು ನಮೂದಿಸಲಾದ ರಶೀದಿಯನ್ನು ನೀಡಿದ್ದಾರೆನ್ನಲಾಗಿದೆ‌.

ಈ ಹಿಂದೆ ಕೂಡ ಇದೇ ರೀತಿ 2012 ಎಂದು ನಮೂದಿಸಿದ ರಶೀದಿಯನ್ನು ನೀಡಲಾಗಿದ್ದು, ಹಳೆಯ ದಿನಾಂಕವನ್ನು ನಮೂದಿಸಿ ದಂಡ ವಸೂಲಿ ಮಾಡಿದ ಹಣವನ್ನು ಸರಕಾರಕ್ಕೆ ಪಾವತಿಸದೆ ಪೊಲೀಸರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪವು ಸಾರ್ವಜನಿಕವಾಗಿ ಕೇಳಿ ಬರುತ್ತಿದೆ.

Also Read  ಡಾಕ್ಟರ್‌ ವೇಷ ಧರಿಸಿ ಕಳ್ಳತನ ! ➤ ರೋಗಿಯ ಚಿನ್ನದ ಸರ ಕದ್ದು ಪರಾರಿ

ಈ ಬಗ್ಗೆ ಸ್ಪಷ್ಟನೆ ನೀಡಿರುವ ಕಡಬ ಠಾಣಾ ಉಪ ನಿರೀಕ್ಷಕರಾದ ಪ್ರಕಾಶ್ ದೇವಾಡಿಗ, ಇಸವಿ ಬದಲಾಯಿಸಿ ನಾವು ಯಾರಿಗೂ ರಶೀದಿ ನೀಡಿಲ್ಲ. ಒಂದು ವೇಳೆ 2017 ಎಂದು ಬರೆದಿರುವುದು 2012 ಎಂದು ಕಂಡಿರಲೂಬಹುದು ಎಂದು ಸಾರ್ವಜನಿಕರ ಆರೋಪವನ್ನು ತಳ್ಳಿ ಹಾಕಿದ್ದಾರೆ.

error: Content is protected !!
Scroll to Top