ಪ್ರೇಮಿಗಳ ದಿನಕ್ಕೆ ಕೇಂದ್ರ ಸರಕಾರ ರಜೆ ಘೋಷಿಸಲು ವಾಟಾಳ್ ನಾಗರಾಜ್ ಆಗ್ರಹ ► ಕುರಿಗಳಿಗೆ ಮದುವೆ ಮಾಡುವ ಮೂಲಕ ‘ವ್ಯಾಲೆಂಟೈನ್ಸ್ ಡೇ’ ಆಚರಣೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.14. ಪ್ರೀತಿಸಿ ಮದುವೆಯಾಗುವ ಜೋಡಿಗೆ ರಾಜ್ಯ ಸರ್ಕಾರ 50 ಸಾವಿರದಿಂದ 1 ಲಕ್ಷ ಪ್ರೋತ್ಸಾಹ ಧನ ನೀಡಲಿ ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.

ಬುಧವಾರ ಕುರಿಗಳಿಗೆ ಮದುವೆ ಮಾಡುವ ಮೂಲಕ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಪ್ರೇಮಿಗಳ ದಿನವನ್ನು ವಿಶೇಷವಾಗಿ ಆಚರಿಸಿ ಮಾತನಾಡಿದ ವಾಟಾಳ್ ನಾಗರಾಜ್, ಪ್ರೇಮಿಗಳ ದಿನವನ್ನು ನಾವು ವಿರೋಧಿಸಬಾರದು. ಪ್ರೇಮಿಗಳ ದಿನದಂದು ಕೇಂದ್ರ ಸರ್ಕಾರ ಒಂದು ದಿನ ರಜೆ ಘೋಷಿಸಬೇಕು. ಪ್ರೀತಿಗೆ ಯಾವುದೇ ಜಾತಿ ಅಥವಾ ಸಮುದಾಯಗಳಿಲ್ಲ. ಪ್ರೀತಿಸಿ ಮದುವೆ ಆಗುವ ಜೋಡಿಗೆ ರಾಜ್ಯ ಸರ್ಕಾರ 50 ಸಾವಿರದಿಂದ 1 ಲಕ್ಷ ಪ್ರೋತ್ಸಾಹ ಧನ ನೀಡಬೇಕು ಎಂದು ಆಗ್ರಹಿಸಿದರು.

Also Read  ಆಸ್ತಿ ವಿವಾದ ➤ ತಂದೆಯಿಂದ ಮಗನ ಮೇಲೆ ಹಲ್ಲೆ..!

error: Content is protected !!
Scroll to Top