ಬಿದ್ದು ಸಿಕ್ಕಿದ 14 ಸಾವಿರ ರೂ ಹಣವನ್ನು ದೇವಸ್ಥಾನದ ಅರ್ಚಕರಿಗೊಪ್ಪಿಸಿದ ಪತ್ರಕರ್ತ

(ನ್ಯೂಸ್ ಕಡಬ) newskadaba.com ಮೂಡುಬಿದಿರೆ, ಫೆ. 29. ಶಿರ್ತಾಡಿ- ವಾಲ್ಪಾಡಿಯ ಅರ್ಜುನಾಪುರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ವ್ಯಕ್ತಿಯೋರ್ವರಿಗೆ ಸಿಕ್ಕಿದ 14,010 ರೂ. ಹಣವನ್ನು ಶ್ರೀ ಕ್ಷೇತ್ರದ ಅರ್ಚಕರಿಗೊಪ್ಪಿಸಿದ ಕುರಿತು ವರದಿಯಾಗಿದೆ.

ಪತ್ರಕರ್ತ ಆರ್.ಬಿ.ಜಗದೀಶ್ ರವರು ಇಂದು (ಗುರುವಾರ) ಬೆಳಿಗ್ಗೆ 8.30ರ ವೇಳೆಗೆ ಶಿರ್ತಾಡಿ- ವಾಲ್ಪಾಡಿಯ ಅರ್ಜುನಾಪುರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಹಿಂತಿರುಗುತ್ತಿದ್ದ ವೇಳೆ ಮೆಟ್ಟಲಿನಲ್ಲಿ ನೋಟುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿರುವುದನ್ನು ಗಮನಿಸಿದ್ದರು. ಅದರಲ್ಲಿ ಒಟ್ಟು 14,010 ರೂ. ಹಣವಿದ್ದು, ಅದನ್ನು ಶ್ರೀ ಕ್ಷೇತ್ರದ ಅರ್ಚಕ ಸುದರ್ಶನ ಭಟ್ ಅವರಿಗೆ ಒಪ್ಪಿಸಿದ್ದಾರೆ.

Also Read  ಶಾಸಕರ ಅನುದಾನ ಬಿಡುಗಡೆ

 

error: Content is protected !!
Scroll to Top