1 ಗಂಟೆಯಲ್ಲಿ 81 ಬಾರಿ ರಾಷ್ಟ್ರಗೀತೆ ಹಾಡಿ ವರ್ಲ್ಡ್ ರೆಕಾರ್ಡ್ ಮಾಡಿದ ಕಡಬದ ಗ್ರೀಷ್ಮಾ ರೈ

(ನ್ಯೂಸ್ ಕಡಬ) newskadaba.com ಕಡಬ, ಫೆ. 28. ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ 9ನೇ ತರಗತಿ ವಿದ್ಯಾರ್ಥಿನಿ ಗ್ರೀಷ್ಮಾ ರೈ ಅವರು 1 ಗಂಟೆಯಲ್ಲಿ 81 ಬಾರಿ ನಿರಂತರವಾಗಿ ರಾಷ್ಟ್ರ ಗೀತೆಯನ್ನು ಹಾಡುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧನೆಯನ್ನು ಮಾಡಿದ್ದಾರೆ.

ಇವರು ಶಾಸ್ತ್ರೀಯ ಸಂಗೀತವನ್ನು ವಿದುಷಿ ಪಾರ್ವತಿ ಭಟ್ ಮತ್ತು ಸುಗಮ ಸಂಗೀತವನ್ನು ಡಾ. ಕಿರಣ್ ಕುಮಾರ್ ಗಾನಸಿರಿ ಮತ್ತು ಶ್ರೀ ಲಕ್ಷ್ಮಿ. ಎಸ್ ಪುತ್ತೂರು ಇವರ ಜೊತೆ ಮಾರ್ಗದರ್ಶನ ಪಡೆಯುತ್ತಿದ್ದಾರೆ. ಇವರು ಬೆಳಂದೂರು ಗ್ರಾಮ, ಕಾರ್ಕಳ ನಿವಾಸಿ ಶ್ರೀ ಹರೀಶ್ ರೈ ಮತ್ತು ಶ್ರೀಮತಿ ಶಂಕರಿ ರೈ ರವರ ಪುತ್ರಿ.

Also Read  ಗೋಳಿತ್ತಡಿಯಿಂದ ತ್ರಿವೇಣಿ ಸರ್ಕಲ್ ಮರು ಡಾಮರೀಕರಣ ► ನಬಾರ್ಡ್‌ನಿಂದ 49 ಲಕ್ಷ ರೂ.ಬಿಡುಗಡೆ

error: Content is protected !!
Scroll to Top