ಜಲಜೀವನ್ ಮಿಷನ್- ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 27. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಯೋಜನಾ ಬೆಂಬಲ ಸಂಪನ್ಮೂಲ ಸಂಸ್ಥೆ, ಗ್ರಾಮ್ಸ್- ರಾಯಚೂರು ಇವರ ಸಹಯೋಗದಲ್ಲಿ ಫೆ. 26 ರಂದು ಜಲಜೀವನ್ ಮಿಷನ್ ಯೋಜನೆಯ ಪ್ರಚಾರ ಕಾರ್ಯಕ್ರಮಕ್ಕೆ ದ.ಕ. ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ. ಚಾಲನೆ ನೀಡಿದರು.

ನೀರಿನ ಸದ್ಬಳಕೆ, ಮಳೆ ನೀರಿನ ಕೊಯ್ಲು, ಬೂದು ನೀರಿನ ನಿರ್ವಹಣೆ ಬಗ್ಗೆ ಮಾಹಿತಿಯನ್ನು ಸಾರುವ ಈ ವಾಹನವು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್‍ ಗಳಲ್ಲಿ ಸಂಚರಿಸಿ ಜನರಿಗೆ ಮಾಹಿತಿ ನೀಡಲಿದೆ. ಕಾರ್ಯಕ್ರಮದಲ್ಲಿ ಕಾರ್ಯಪಾಲಕ ಇಂಜಿನಿಯರ್ ಎನ್. ಡಿ. ರಘುನಾಥ್, ಜಲಜೀವನ್ ಮಿಷನ್‍ ನ ಜಿಲ್ಲಾ ಯೋಜನಾ ವ್ಯವಸ್ಥಾಪಕ ವಿಘ್ನೇಶ್‍ ರಾಜ್, ಕುಡಿಯುವ ನೀರಿನ ಪರೀಕ್ಷಾ ಪ್ರಯೋಗಾಲಯದ ಹಿರಿಯ ಅನಲಿಸ್ಟ್ ವಿಜಯಲಕ್ಷೀ ಮತ್ತಿತರರು ಭಾಗವಹಿಸಿದ್ದರು.

Also Read  ಅರಣ್ಯದಲ್ಲಿ ಆಕಸ್ಮಿಕ ಕಾಡ್ಗಿಚ್ಚು ಪ್ರಕರಣ ➤ಗಂಭೀರ ಗಾಯಗೊಂಡ ಸಿಬ್ಬಂದಿಯೋರ್ವ ಮೃತ್ಯು

error: Content is protected !!
Scroll to Top