ಪರಿಸರವನ್ನು ಹೊರತುಪಡಿಸಿ ಬೇರೆ ವಿಜ್ಞಾನವಿಲ್ಲ- ಶಶಿಧರ ಪಿ

(ನ್ಯೂಸ್ ಕಡಬ) newskadaba.com ಕಡಬ, ಫೆ. 27. ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ಅನ್ವೇಷಣೆ 2024 ಮಾದರಿ ಪ್ರದರ್ಶನ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ ಫೆಬ್ರವರಿ 23ರಂದು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

ಆಧುನಿಕ ಯುಗದಲ್ಲಿ ವಿಜ್ಞಾನ ಅಗತ್ಯ, ಆದರೆ ಅದರ ಒಳಿತು ಕೆಡುಕುಗಳನ್ನು ಅರಿತುಕೊಂಡು ಎಷ್ಟು ಬೇಕೋ ಅಷ್ಟೇ ಬಳಸಿಕೊಳ್ಳಬೇಕು. ಪರಿಸರವನ್ನು ಹೊರತುಪಡಿಸಿ ಬೇರೆ ವಿಜ್ಞಾನವಿಲ್ಲ ಎಂದು ಶಶಿಧರ ಪಿ ನಿವೃತ್ತ ಮುಖ್ಯ ಗುರುಗಳು ಜಿ.ಎಚ್.ಎಸ್ ದೋಳ್ಪಾಡಿ ಅತಿಥಿ ನೆಲೆಯಲ್ಲಿ ಮಾತನಾಡಿದರು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಸಂಸ್ಥೆಯ ಸಂಚಾಲಕರಾದ ಶ್ರೀ ವೆಂಕಟರಮಣ ರಾವ್ ಮಂಕುಡೆ ವಹಿಸಿ ನಿತ್ಯ ಜೀವನದಲ್ಲಿ ವಿಜ್ಞಾನವನ್ನು ಅಳವಡಿಸಿಕೊಳ್ಳಬೇಕು. ಎಷ್ಟೇ ವಿಜ್ಞಾನ ಮುಂದುವರಿದರೂ ನಮ್ಮ ಆಧ್ಯಾತ್ಮ ಶಕ್ತಿ ಪರಿಸರವನ್ನು, ಪ್ರಪಂಚವನ್ನು ಕಾಪಾಡುತ್ತದೆ ಎಂದು ಅಧ್ಯಕ್ಷೀಯ ನುಡಿಗಳನ್ನಾಡಿದರು. ಅನ್ವೇಷಣೆ 2024ರ ಪ್ರಯುಕ್ತ ವಿದ್ಯಾರ್ಥಿಗಳಿಂದ ವರ್ಕಿಂಗ್ ಮತ್ತು ನಾನ್ ವರ್ಕಿಂಗ್ ಮಾದರಿ ಹಾಗೂ ವಿಜ್ಞಾನದ ಚಿತ್ರಗಳ ರಂಗೋಲಿ ಸ್ಪರ್ಧೆ ನಡೆಯಿತು. ವೇದಿಕೆಯಲ್ಲಿ ಪ್ರೌಢ ವಿಭಾಗದ ಮುಖ್ಯ ಗುರುಗಳಾದ ಶ್ರೀಮತಿ ಶೈಲಶ್ರೀ ರೈ ಎಸ್ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ವಿಜ್ಞಾನ ಶಿಕ್ಷಕಿ ಕುಮಾರಿ ಕಾವ್ಯಶ್ರೀ ಡಿ ಅತಿಥಿಗಳನ್ನು ಪರಿಚಯಿಸಿದರು. ಪೂರ್ವಿ ರೈ ಸ್ವಾಗತಿಸಿ, ಮಧುರಾ ರೈ ಬಿ ವಂದಿಸಿದರು. ಶ್ರೇಯಸ್ ಬಿ ವಿಜೇತರ ಪಟ್ಟಿಯನ್ನು ವಾಚಿಸಿ, ಮೋನಿಷಾ ರೈ ಕಾರ್ಯಕ್ರಮ ನಿರೂಪಿಸಿದರು.

Also Read  ಶ್ರೀನಗರ: ಇಬ್ಬರು ಉಗ್ರರನ್ನು ನೆಲಕ್ಕುರುಳಿಸಿದ ಭದ್ರತಾ ಪಡೆಗಳು

error: Content is protected !!
Scroll to Top