ಕುಕ್ಕೆ ಶ್ರೀ ಸುಬ್ರಹ್ಮಣ್ಯ ರೈಲು ನಿಲ್ದಾಣ ಮರುನಾಮಕರಣಕ್ಕೆ ಮನವಿ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಫೆ. 27. ಕಡಬ ತಾಲೂಕಿನ ನೆಟ್ಟಣದಲ್ಲಿರುವ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣ (SBHR) ದ ಹೆಸರನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ರೈಲು ನಿಲ್ದಾಣ ಎಂದು ಮರು ನಾಮಕರಣ ಮಾಡುವಂತೆ ದಕ್ಷಿಣ ಕನ್ನಡ ಜಿಲ್ಲಾ ಗ್ರಾಮೀಣ ರೈಲು ಬಳಕೆದಾರ ಸಂಘ, ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣ ವತಿಯಿಂದ ಅಧಿಕಾರಿಗಳ ಮೂಲಕ ಪ್ರಧಾನ ಮಂತ್ರಿ, ರೈಲ್ವೇ ಸಚಿವರು ಹಾಗೂ ಸಂಸದರಿಗೆ ಮನವಿ ಸಲ್ಲಿಸಲಾಯಿತು.

ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಲ್ಲಿ ರೈಲ್ವೇ ಸುರಕ್ಷಾ ಸಿಬ್ಬಂದಿ ಕಾರ್ಯಾಚರಣೆ ಸ್ಥಾಪನೆ, ಪ್ರಥಮ ಚಿಕಿತ್ಸಾ ಕೇಂದ್ರ, ಸರ್ವಿಸ್ ಕ್ಯಾಂಟೀನ್, ಎರಡನೇ ಪ್ಲಾಟ್‌ ಫಾರಂ ಅಭಿವೃದ್ಧಿ, ಹಾಲ್ಟಿಂಗ್ ಸ್ಟೇಷನ್, ಪಾದಾಚಾರಿ ರಸ್ತೆ, ಮುಖದ್ವಾರ, ಪ್ಲಾಟ್ ಫಾರಂ ಸ್ವಚ್ಚತೆ, ಉದ್ಯಾನವನ, ಎ.ಟಿ.ಎಂ. ವ್ಯವಸ್ಥೆ ಮಾಡುವಂತೆಯೂ ಮನವಿಯಲ್ಲಿ ತಿಳಿಸಲಾಗಿದೆ. ಸಂಘದ ಪ್ರಸಾದ್ ಕೆ.ಜಿ. ಹಾಗೂ ಸುದರ್ಶನ್ ಪುತ್ತೂರು ಮನವಿ ಸಲ್ಲಿಸಿದರು.

Also Read  ಪುತ್ತೂರು ತಾ. ಕನ್ನಡ ಮಾಧ್ಯಮ ಶಾಲೆಗಳಲ್ಲಿ SSLC ಯಲ್ಲಿ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಸುವರ್ಣವಕಾಶ ➤ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಉಚಿತ ಶಿಕ್ಷಣ

error: Content is protected !!
Scroll to Top