ಕಡಬ: ಜೀಪು-ಸ್ಕೂಟರ್ ನಡುವೆ ಡಿಕ್ಕಿ- ಅಪಘಾತದ ರಭಸಕ್ಕೆ ಜೀಪು ಮೇಲಿಂದ ರಸ್ತೆಗೆ ಎಸೆಯಲ್ಪಟ್ಟ ಯುವತಿ

(ನ್ಯೂಸ್ ಕಡಬ) neskadaba.com ಕಡಬ, ಫೆ. 26. ಜೀಪು ಹಾಗೂ ಸ್ಕೂಟರ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಸ್ಕೂಟರ್ ನಲ್ಲಿದ್ದ ಮೂವರು ಸಿನಿಮೀಯ ರೀತಿಯಲ್ಲಿ ಪವಾಡ ಸದೃಶ ಪಾರಾದ ಘಟನೆ ಉಪ್ಪಿನಂಗಡಿ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬ ಸಮೀಪ ಹೊಸಮಠ ದೇರಾಜೆ ಬಳಿ ಫೆ. 24ರ ಶನಿವಾರದಂದು ನಡೆದಿದೆ.

 

ಹೊಸಮಠದಿಂದ ತೆರಳುತ್ತಿದ್ದ ಸ್ಕೂಟರ್ ದೇರಾಜೆ ಕ್ರಾಸ್ ಬಳಿ ಮುಖ್ಯ ರಸ್ತೆಗೆ ಬರುತ್ತಿದ್ದ ಜೀಪಿಗೆ ಡಿಕ್ಕಿಯಾಗಿದೆ. ಢಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರ ಜೀಪಿನ ಬಾನೆಟ್ ಮೇಲೆ ಬಿದ್ದರೆ, ಮತೋರ್ವ ಸವಾರೆ ಜೀಪಿನ ಇನ್ನೊಂದು ಭಾಗಕ್ಕೆ ಎಸೆಯಲಟ್ಟು ಪವಾಡ ಸದೃಶವಾಗಿ ಪ್ರಾಣ ಹಾನಿ ತಪ್ಪಿದೆ. ಪ್ರಕರಣ ರಾಜಿಯಲ್ಲಿ ಇತ್ಯಾರ್ಥವಾಗಿದೆ ಎಂದು ತಿಳಿದುಬಂದಿದ್ದು, ಯಾವುದೇ ಪ್ರಕರಣ ದಾಖಲಾಗಿಲ್ಲ.

Also Read  ಮಂಗಳೂರು: ಆಟೋ ನಿಲ್ದಾಣದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ... !!!

error: Content is protected !!
Scroll to Top