ದಕ್ಷಿಣ ಕನ್ನಡ ಮ್ಯೂಚುಯಲ್‌ ಬೆನಿಫಿಟ್ ನಿಧಿ ಲಿಮಿಟೆಡ್ 4ನೇ ಕಡಬ ಶಾಖೆ ಸೋಮವಾರ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಫೆ.24. ದಕ್ಷಿಣ ಕನ್ನಡ ಮ್ಯೂಚುಯಲ್‌ ಬೆನಿಫಿಟ್ ನಿಧಿ ಲಿಮಿಟೆಡ್ ನ 4ನೇ ಶಾಖೆಯು ಸೋಮವಾರ (ಫೆಬ್ರವರಿ 26) ದಂದು ಕಡಬದಲ್ಲಿ ಶುಭಾರಂಭಗೊಳ್ಳಲಿದೆ.

ಕಡಬದ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಸಮೀಪದ ಸೈಂಟ್ ಜೋಕಿಮ್ಸ್ ಕಟ್ಟಡದಲ್ಲಿ ಫೆಬ್ರವರಿ 26 ರಂದು ಬೆಳಿಗ್ಗೆ 10.30ಕ್ಕೆ ನೂತನ ಶಾಖೆಯನ್ನು ದ.ಕ.ಜಿಲ್ಲಾ ಸಂಸದರಾದ ನಳಿನ್ ಕುಮಾರ್ ಕಟೀಲ್ ಹಾಗೂ ದಕ್ಷಿಣ ಕನ್ನಡ ಮ್ಯೂಚುಯಲ್‌ ಬೆನಿಫಿಟ್ ನಿಧಿ ಲಿಮಿಟೆಡ್‌ ನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸ್ಥಾಪಕ ಸದಸ್ಯರಾದ ಆಲ್ವಿನ್ ಜೋಯಲ್‌ ನೊರೋನ್ಹಾ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಸುಳ್ಯ ಶಾಸಕರಾದ ಭಾಗೀರಥಿ ಮುರುಳ್ಯ ವಹಿಸಲಿದ್ದಾರೆ. ವಿಶೇಷ ಅತಿಥಿಯಾಗಿ ಜೋನ್‌ ಸುರೇಶ್, ಮುಖ್ಯ ಅತಿಥಿಗಳಾಗಿ ಎಸ್.ಅಂಗಾರ, ಕೃಷ್ಣ ಶೆಟ್ಟಿ, ಪಿ.ಪಿ.ವರ್ಗೀಸ್, ಮೀರಾ ಸಾಹೇಬ್, ಸೀತಾರಾಮ ಗೌಡ ಪೊಸವಳಿಕೆ, ರಮೇಶ್ ಕಲ್ಪುರೆ, ಸಿ.ಪಿ.ಜೋಸೆಫ್, ಚಂದ್ರಶೇಖರ ಗೌಡ, ಸತೀಶ್ ನಾಯಕ್‌ ಭಾಗವಹಿಸಲಿದ್ದಾರೆ. ಜೊತೆಗೆ ಕ್ಯಾನ್ಸರ್ ಪೀಡಿತರಿಗೆ ಧನ ಸಹಾಯ, ಹಲವರಿಗೆ ಸನ್ಮಾನ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Also Read  ಕಡಬ: ಎಲೈಟ್ ಮೊಬೈಲ್ಸ್ - ಸೇಲ್ಸ್ & ಸರ್ವೀಸ್ ಶುಭಾರಂಭ ➤ ಶುಭಾರಂಭದ ಪ್ರಯುಕ್ತ ವಿಶೇಷ ಡಿಸ್ಕೌಂಟ್ ಕೂಪನ್ ಲಭ್ಯ

error: Content is protected !!
Scroll to Top