ಕಡಬ ಭಜನಾ ಮಂಡಳಿಯ ಅಧ್ಯಕ್ಷ ಸೋಮಪ್ಪ ನಾಯ್ಕ್ ಅವರಿಗೆ ಒಡಿಯೂರಿನ ತುಳುನಾಡ ಜಾತ್ರೆಯಲ್ಲಿ ಸನ್ಮಾನ

(ನ್ಯೂಸ್ ಕಡಬ) newskadaba.com ಕಡಬ, ಫೆ. 24. ಧಾರ್ಮಿಕ ಕ್ಷೇತ್ರ, ಸಂಘಟನೆ, ಸಹಕಾರ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಒಡಿಯೂರಿನಲ್ಲಿ ನಡೆದ ತುಳುನಾಡ ಜಾತ್ರೆ ಕಾರ್ಯಕ್ರಮದಲ್ಲಿ ಕಡಬ ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿಯ ಅಧ್ಯಕ್ಷ ಸೋಮಪ್ಪ ನಾಯ್ಕ್ ಅವರನ್ನು ಸನ್ಮಾನಿಸಿ ಗೌರವಿಸಲಾಗಿದೆ.

ಸುಮಾರು 40 ವರ್ಷಗಳಿಂದ ಭಜನಾ ಸೇವೆಯನ್ನು ನಡೆಸುವುದರ ಜತೆಗೆ ಧಾರ್ಮಿಕ ಕ್ಷೇತ್ರದಲ್ಲಿ ತನ್ನ ಸೇವೆಯನ್ನು ಸಲ್ಲಿಸಿದ್ದಾರೆ. ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನ, ಕಡಬ ಶ್ರೀ ಜಯದುರ್ಗಾಪರಮೇಶ್ವರಿ ದೇವಸ್ಥಾನದ ಟ್ರಸ್ಟಿಯಾಗಿ, ಜೀರ್ಣೋದ್ಧಾರ ಸಮಿತಿಯ ಸದಸ್ಯರಾಗಿ ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಶ್ರೀ ಗುರುದೇವಾ ಸೇವಾ ಬಳಗದ ಸಕ್ರೀಯ ಸದಸ್ಯನಾಗಿ, ಒಡಿಯೂರು ಸಹಕಾರಿ ಸಂಘದ ನಿರ್ದೇಶಕನಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಈ ಎಲ್ಲಾ ಸೇವೆಯನ್ನು ಗುರುತಿಸಿ ಸೋಮಪ್ಪ ನಾಯ್ಕ್ ಅವರನ್ನು ಒಡಿಯೂರುನಲ್ಲಿ ನಡೆದ ತುಳುನಾಡ ಜಾತ್ರೆಯಲ್ಲಿ ಸನ್ಮಾನಿಸಿ ಗೌರವಿಸಲಾಗಿದೆ.

Also Read  ಪೂಜೆ ಸೇವೆಗಳು ಆರಂಭ ➤ ಕಟೀಲಿನಲ್ಲಿ ಭಕ್ತರ ಸಂಖ್ಯೆ ಹೆಚ್ಚಳ

error: Content is protected !!
Scroll to Top