ಡಾಕ್ಟರ್ ಎಂದು ನಂಬಿಸಿ ಮಹಿಳೆಗೆ ಲಕ್ಷಾಂತರ ರೂ. ವಂಚಿಸಿದ ಭೂಪ..!

(ನ್ಯೂಸ್ ಕಡಬ) newskadaba.com ಉಡುಪಿ, ಫೆ. 23. ಅಪರಿಚಿತ ವ್ಯಕ್ತಿಯೋರ್ವ ತಾನು ಡಾಕ್ಟರ್ ಎಂಬುವುದಾಗಿ ನಂಬಿಸಿ ಮಹಿಳೆಯೋರ್ವರಿಗೆ ಲಕ್ಷಾಂತರ ರೂ. ವಂಚಿಸಿದ ಘಟನೆ ಬೆಳಕಿಗೆ ಬಂದಿದೆ.

ದೂರಿನ ಪ್ರಕಾರ, ಸಂತ್ರಸ್ತ ಮಹಿಳೆ ಕಂಪೆನಿಯೊಂದರಲ್ಲಿ ಬಿಸಿನೆಟಸ್ ಪಾರ್ಟ್ನರ್ ಆಗಿ ಕೆಲಸ ಮಾಡಿಕೊಂಡಿದ್ದು, ಬಿಸಿನೆಸ್ ಮುಂದುವರೆಸುವ ಬಗ್ಗೆ ಇಂಟರ್ನೆಟ್ ಕನೆಕ್ಷನ್ ಮಾಡಿಕೊಂಡಿದ್ದರು. ಕಳೆದ ಜನವರಿ 24ರಂದು ಅಪರಿಚಿತ ವ್ಯಕ್ತಿಯೊಬ್ಬ ತಾನು ಡಾಕ್ಟರ್ ಎಂಬುವುದಾಗಿ ಪರಿಚಯ ಮಾಡಿಕೊಂಡು ವಾಟ್ಸಾಪ್ ಮೂಲಕ ಚಾಟ್ ಮಾಡಿದ್ದು, ನಂತರ ಆತನು ಲಂಡನ್ ನಿಂದ ಭಾರತಕ್ಕೆ ಬರುವುದಾಗಿ ಹೇಳಿದ್ದನು. ಫೆಬ್ರವರಿ 02ರಂದು ಬೆಳಿಗ್ಗೆ 10:30 ಗಂಟೆಗೆ ಸಂತ್ರಸ್ತೆಗೆ ಬೇರೊಂದು ನಂಬರಿನಿಂದ ಕರೆ ಬಂದಿದ್ದು, ಅವರ ಸ್ನೇಹಿತ ದಿಲ್ಲಿ ಏರ್ಪೋರ್ಟ್ ಅಥಾರಿಟಿಯಿಂದ ಕರೆ ಮಾಡುತ್ತಿದ್ದು, ನಿಮ್ಮ ಫ್ರೆಂಡ್ ನಮ್ಮ ಕಸ್ಟಡಿಯಲ್ಲಿದ್ದು ಇವರನ್ನು ಬಿಡುಗಡೆ ಮಾಡಬೇಕಾದರೆ ಪೆನಾಲ್ಟಿ ಕಟ್ಟಬೇಕಾಗಿ ಹೇಳಿದ್ದರು. ಅದರಂತೆ ದೂರುದಾರರು ಸರ್ಕಾರದಿಂದ ತಮ್ಮ ಮೇಲೆ ಲೀಗಲ್ ಪ್ರೊಸೀಜರ್ ಆಗಬಹುದೆಂದು ಹೆದರಿ ಹಣ ಪಾವತಿ ಮಾಡಿದ್ದಾರೆ ಎನ್ನಲಾಗಿದೆ. ಸಂತ್ರಸ್ತೆ ಫೆಬ್ರವರಿ 16ರಿಂದ ಫೆಬ್ರವರಿ 20 ರವರೆಗೆ ಒಟ್ಟು 4,96,000/- ರೂಪಾಯಿ ಹಣವನ್ನು ಕೆನರಾ ಬ್ಯಾಂಕ್ ಖಾತೆಯ ಮೂಲಕ ಹಾಗೂ ಪೋನ್ ಪೇ ಮೂಲಕ ವರ್ಗಾಯಿಸಿರುವುದಾಗಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಅರಣ್ಯದಲ್ಲಿ ಆಕಸ್ಮಿಕ ಕಾಡ್ಗಿಚ್ಚು ಪ್ರಕರಣ ➤ಗಂಭೀರ ಗಾಯಗೊಂಡ ಸಿಬ್ಬಂದಿಯೋರ್ವ ಮೃತ್ಯು

error: Content is protected !!
Scroll to Top