ವಿಧಾನಸಭೆಯ ಬಜೆಟ್ ಅಧಿವೇಶನ ಸೋಮವಾರಕ್ಕೆ ವಿಸ್ತರಣೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ. 23. ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಅನಾರೊಗ್ಯದ ಹಿನ್ನೆಲೆ ಇಂದು (ಶುಕ್ರವಾರ) ಮುಕ್ತಾಯವಾಗಬೇಕಿದ್ದ ವಿಧಾನಸಭೆ ಬಜೆಟ್ ಅಧಿವೇಶನವನ್ನು ಸೋಮವಾರಕ್ಕೆ ವಿಸ್ತರಿಸಲಾಗಿದೆ.

ಬಜೆಟ್ ಮೇಲಿನ ಕೆಲವು ಪ್ರಮುಖ ಮಸೂದೆಗಳ ಮೇಲಿನ ಚರ್ಚೆ ಹಾಗೂ ಅಂಗೀಕಾರ ಬಾಕಿಯಿದ್ದು ಸಿಎಂ ಸಿದ್ದರಾಮಯ್ಯರವರಿಗೆ ಅನಾರೋಗ್ಯವಿರುವುದರಿಂದ ಕಲಾಪದಲ್ಲಿ ಸರಿಯಾಗಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರು ಎರಡು ದಿನಗಳ ಕಾಲ ವಿಶ್ರಾಂತಿ ತೆಗೆದುಕೊಂಡು ಸೋಮವಾರ ಸದನದಲ್ಲಿ ಕಲಾಪಕ್ಕೆ ಹಾಜರಾಗಲಿದ್ದಾರೆ. ಕಾರ್ಯಕಲಾಪ ಸಲಹಾ ಸಮಿತಿ ಸಭೆಯಲ್ಲಿ ನಡೆದ ತೀರ್ಮಾನದ ಬಳಿಕ ಅಧಿವೇಶನ ಒಂದು ದಿನ ವಿಸ್ತರಿಸುವ ನಿರ್ಣಯವನ್ನು ಸ್ಪೀಕರ್‌ ಯು.ಟಿ . ಖಾದರ್ ಪ್ರಕಟಿಸಿದರು.

Also Read  ಜನವರಿ 10 ಏಣಿತಡ್ಕ ದೈವಗಳ ನೇಮೋತ್ಸವ

error: Content is protected !!
Scroll to Top