ಕೇರಳದಲ್ಲಿ ಸಿಪಿಎಂ ನಾಯಕನ ಬರ್ಬರ ಹತ್ಯೆ!

(ನ್ಯೂಸ್ ಕಡಬ) newskadaba.com ಕೋಝಿಕ್ಕೋಡ್, ಫೆ. 23. ಉತ್ಸವ ನಡೆಯುತ್ತಿದ್ದ ಸಂದರ್ಭದಲ್ಲಿ ಸಿಪಿಎಂ ನಾಯಕರೊಬ್ಬರನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಪೆರುವತ್ತೂರ್‌ ನ ಚೆರಿಯಾಪುರಂ ದೇವಾಲಯದ ಆವರಣದಲ್ಲಿ ಗುರುವಾರದಂದು ರಾತ್ರಿ ನಡೆದಿದೆ.

ಕೊಲೆಯಾದವರನ್ನು ಕೊಯಿಲಾಂಡಿ ಸಿಪಿಎಂ ಕೇಂದ್ರೀಯ ಸ್ಥಳೀಯ ಸಮಿತಿಯ ಕಾರ್ಯದರ್ಶಿ ಪಿ.ವಿ.ಸತ್ಯನಾಥನ್ (62) ಎಂದು ಗುರುತಿಸಲಾಗಿದೆ. ಮೂಲಗಳ ಪ್ರಕಾರ, ಗುರುವಾರದಂದು ರಾತ್ರಿ 10 ಗಂಟೆಗೆ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸತ್ಯನಾಥನ್ ಮೇಲೆ ಈ ದಾಳಿ ನಡೆದಿದೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

Also Read  ಮಂಗಳೂರು: ಸಿಸಿಬಿ ಕಾರ್ಯಾಚರಣೆ - ಕುಖ್ಯಾತ ಆರೋಪಿ ಅರೆಸ್ಟ್

error: Content is protected !!
Scroll to Top