ಕರಾವಳಿ ಜಲಪ್ರದೇಶದಲ್ಲಿ ಚೀನಾ ಬೋಟ್ ಪತ್ತೆ- ಕಾವಲು ಪಡೆ ಅಲರ್ಟ್

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 23. ಮೂರು ದಿನಗಳ ಹಿಂದೆ ಹೊನ್ನಾವರದಿಂದ ಆಳಸಮುದ್ರದ ಮೀನುಗಾರಿಕೆಗೆಂದು ತೆರಳಿದ್ದ ರಾಜ್ಯದ ಬೋಟ್‌ನಲ್ಲಿದ್ದ ಮೀನುಗಾರರಿಗೆ ಸುಮಾರು 200 ನಾಟಿಕಲ್ ಮೈಲು ದೂರದಲ್ಲಿ ಬೇರೆ ದೇಶದ ಬೋಟ್‌ ಒಂದು ಕಂಡುಬಂದಿದ್ದು, ಮಾಹಿತಿ ತಿಳಿದ ಕರಾವಳಿ ಕಾವಲು ಪಡೆಯ ಪೊಲೀಸರು ಹಾಗೂ ಕೋಸ್ಟ್‌ ಗಾರ್ಡ್‌ ಅಲರ್ಟ್ ಆಗಿದ್ದಾರೆ.


ಈ ಬಗ್ಗೆ ಕುಮಟಾ ಪೊಲೀಸರು, ಕರಾವಳಿ ಕಾವಲು ಪಡೆ ಮತ್ತು ಕೋಸ್ಟ್‌ ಗಾರ್ಡ್‌ನವರಿಗೆ ಮಾಹಿತಿ ನೀಡಿದ್ದರು. ಬೋಟ್ ಕುರಿತಾಗಿ ಅಧಿಕಾರಿಗಳು ಮಾಹಿತಿ ಕಲೆ ಹಾಕಿದಾಗ ಅದು ಚೀನಾದ ಬೋಟ್ ಎಂಬ ವಿಚಾರ ಬೆಳಕಿಗೆ ಬಂದಿತ್ತು. ಪತ್ತೆಯಾದ ‘ಬಿವಿಕೆವೈ5’ ಹೆಸರಿನ ಬೋಟ್ ಚೀನಾದ ಪುಝು ಬಂದರಿನಲ್ಲಿ ನೋಂದಣಿಯಾಗಿರುವ ಮಾಹಿತಿ ಪೊಲೀಸರಿಗೆ ಲಭಿಸಿದೆ. ಈ ಬಗ್ಗೆ ಕುಮಟಾ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Also Read  ಸಂಡೇ ಲಾಕ್ ಡೌನ್ ಸದುಪಯೋಗ ➤ ಕಮಿಲ ಬಸ್ ನಿಲ್ದಾನ ಸ್ವಚ್ಛಗೊಳಿಸಿದ ಪ್ರಗತಿ ಬಂಧು ತಂಡ

error: Content is protected !!
Scroll to Top