ಸ್ಟಾಕ್ ಟ್ರೇಡಿಂಗ್ ಹೂಡಿಕೆ ನೆಪದಲ್ಲಿ 18.53 ಲಕ್ಷ ರೂ. ವಂಚನೆ ಆರೋಪ – ದೂರು ದಾಖಲು

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 23. ಫೇಸ್ ಬುಕ್‌ ನಲ್ಲಿ ಕಾಣಿಸಿಕೊಂಡ ಜಾಹೀರಾತು ನೋಡಿ ಹಣ ಹೂಡಿಕೆ ಮಾಡಿದ ವ್ಯಕ್ತಿಯೋರ್ವರು 18.53 ಲಕ್ಷ ರೂ. ವಂಚನೆಗೊಳಗಾದ ಘಟನೆ ವರದಿಯಾಗಿದೆ.


ವಿಜಯ ಕುಮಾರ್ ಎಂಬವರು ಫೇಸ್‌ ಬುಕ್‌ ನಲ್ಲಿ ಸ್ಟಾಕ್ ಟ್ರೇಡಿಂಗ್ ಬಗೆಗಿನ ಜಾಹೀರಾತು ನೋಡಿ ಅದರಲ್ಲಿದ್ದ ಲಿಂಕ್‌ ಮೂಲಕ ವಾಟ್ಸಾಪ್ ಗ್ರೂಪ್‌ನಲ್ಲಿ ಸೇರ್ಪಡೆಯಾಗಿದ್ದರು ಎಂದೆನ್ನಲಾಗಿದೆ. ಗ್ರೂಪ್‌ ನಲ್ಲಿ ಚೀಫ್ ಅಡ್ಮಿನ್ ಅಗಿದ್ದ ಅಮಿತ್ ಶಾ ಎಂಬಾತ ಪ್ರತಿ ದಿನ ಆನ್‌ ಲೈನ್ ವೀಡಿಯೋ ಕ್ಲಾಸ್ ಮೂಲಕ ಸ್ಟಾಕ್ ಟ್ರೇಡಿಂಗ್‌ ನಲ್ಲಿ ಹಣ ಹೂಡಿಕೆ ಮಾಡಿ ದುಪ್ಪಟ್ಟು ಮಾಡುವ ಬಗ್ಗೆ ವಿವರಿಸುತ್ತಿದ್ದು, ಇದನ್ನೇ ನಿಜವೆಂದು ಭಾವಿಸಿದ ವಿಜಯ್ ಅವರು ಹಣ ತೊಡಗಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. 2024ರ ಜ. 11ರಿಂದ ಫೆ. 5ರವರೆಗೆ ಹಂತ ಹಂತವಾಗಿ ಒಟ್ಟು 18.53 ಲಕ್ಷ ರೂ.ಗಳನ್ನು ಪಾವತಿಸಿದ್ದರು. ಅದನ್ನು ಹಿಂಪಡೆ ಯಲು ಸ್ಟಾಕ್ ಟ್ರೇಡಿಂಗ್ ಕಂಪೆನಿಯ ಕಸ್ಟಮರ್ ಕೇರ್‌ ಗೆ ಸಂರ್ಪಿಕಿಸಿದಾಗ ಶೇ. 40 ಕಮಿಷನ್ ಆಗಿ ನೀಡುವಂತೆ ಹಾಗೂ ಇನ್ನೂ ಹೆಚ್ಚಿನ ಹಣ ಹೂಡಿಕೆ ಮಾಡುವಂತೆ ಒತ್ತಾಯಿಸಿದ್ದರು ಎನ್ನಲಾಗಿದೆ. ಇದರ ಬಗ್ಗೆ ಅನುಮಾನ ಬಂದ ವಿಜಯ ಕುಮಾರ್ ಅವರು ಸ್ನೇಹಿತರಲ್ಲಿ ವಿಚಾರಿಸಿದಾಗ ಮೋಸ ಹೋಗಿರುವುದು ಗೊತ್ತಾಗಿ ಮಂಗಳೂರಿನ ಸೈಬರ್ ಠಾಣೆಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

Also Read  ಕಡಬ: ರಾಮಕುಂಜ ಸಂಸ್ಕೃತ ಹಿ.ಪ್ರಾ.ಶಾಲಾ ಶತಮಾನೋತ್ಸವ ► ಪೂರ್ವಭಾವಿ ಸಭೆ, ಸಮಿತಿ ರಚನೆ

error: Content is protected !!
Scroll to Top