ಕಳ್ಳತನ ಪ್ರಕರಣ- ಸೊತ್ತು ಸಹಿತ ಆರೋಪಿ ವಶಕ್ಕೆ

(ನ್ಯೂಸ್ ಕಡಬ) newskadaba.com ಬಜ್ಪೆ, ಫೆ. 23. ನಾಲ್ಕು ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಯೋರ್ವನನ್ನು ಬಜ್ಪೆ ಪೊಲೀಸರು ಬಂಧಿಸಿ, ಕಳವುಗೈದಿದ್ದ ನಗದು, ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ಬಜ್ಪೆಯಿಂದ ವರದಿಯಾಗಿದೆ.

ಬಂಧಿತನನ್ನು ಪ್ರತಾಪ್ ಎಂದು ಗುರುತಿಸಲಾಗಿದೆ. ಈತನಿಂದ 10 ಸಾವಿರ ರೂ. ನಗದು, ಸುಮಾರು 1 ಲಕ್ಷ ರೂ. ಮೌಲ್ಯದ 4 ಗೋಣಿ ಸುಲಿದ ಅಡಿಕೆ, ಸುಮಾರು 2 ಲಕ್ಷ ರೂ. ಮೌಲ್ಯದ ಆಟೋ ರಿಕ್ಷಾ ಮತ್ತು ಇತರ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಫೆ. 13ರಂದು ಮಿತ್ತಕೊಳಪಿಲದ ಬಳಿಯ ಜನಾರ್ದನ ಗೌಡ ಎಂಬವರ ಮನೆಯಲ್ಲಿದ್ದ 40 ಸಾವಿರ ರೂ. ಹಣ ಕಳವಾದ ಕುರಿತು ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಾರ್ಯಾಚರಣೆ ನಡೆಸಿದ ಪೊಲೀಸರು ಸಂಶಯದ ಮೇಲೆ ಪ್ರತಾಪ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿ ಪ್ರತಾಪ್, ಜನಾರ್ದನ ಗೌಡರ ಮನೆಯಿಂದ ಹಣ ಕಳವು ಮತ್ತು 2023ರಲ್ಲಿ ಕೊಂಪದವು ನೆಲ್ಲಿಗುಡ್ಡೆಯ ನಿವಾಸಿ ಗೋವಿಂದ ಗೌಡ ಎಂಬವರ ಮನೆಯಿಂದ 4 ಗೋಣಿ ಸುಲಿದ ಅಡಿಕೆಯನ್ನು ಕಳವು ಮಾಡಿರುವುದು ಮತ್ತು ಇತರ ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದೆನ್ನಲಾಗಿದೆ.

Also Read  ಹೆರಿಗೆ ವೇಳೆ ತೀವ್ರ ರಕ್ತಸ್ರಾವ- ತಾಯಿ ಮೃತಪಟ್ಟ ಪ್ರಕರಣ ➤ ಒಂದೇ ದಿನದೊಳಗೆ ಹಸುಗೂಸು ಮೃತ್ಯು

error: Content is protected !!
Scroll to Top