ಮಹಾನಗರಪಾಲಿಕೆಯಿಂದ ಉದ್ದಿಮೆ ಪರವಾನಿಗೆ ಪಡೆಯಲು ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 23. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ 60 ವಾರ್ಡುಗಳ ಎಲ್ಲಾ ಉದ್ದಿಮೆದಾರರು ಕಡ್ಡಾಯವಾಗಿ ಉದ್ದಿಮೆ ಪರವಾನಿಗೆಯನ್ನು ಪಡೆದುಕೊಳ್ಳಬೇಕು. ಉದ್ದಿಮೆ ಪರವಾನಿಗೆ ನವೀಕರಣ ಪ್ರಕ್ರಿಯೆಯು ಫೆಬ್ರವರಿ 19 ರಿಂದ ಆರಂಭಗೊಂಡಿದ್ದು, ಆನ್‍ಲೈನ್ ತಂತ್ರಾಂಶದ ಮೂಲಕ ಹೊಸ /ನವೀಕರಣ ಉದ್ದಿಮೆ ಪರವಾನಿಗೆ ಪಡೆಯಲು ಅರ್ಜಿ ಸಲ್ಲಿಸಬಹುದು. 2024-25 ನೇ ಸಾಲಿನ ಆಸ್ತಿ ತೆರಿಗೆ ಪಾವತಿಯಾದ ನಂತರ ಉದ್ದಿಮೆ ಪರವಾನಿಗೆ ತಂತ್ರಾಂಶದಲ್ಲಿ ಉದ್ಯಮಿದಾರರಿಗೆ ಶುಲ್ಕ ಪಾವತಿಸಲು ಅವಕಾಶ ನೀಡಲಾಗುತ್ತದೆ.


ಹಿಂದಿನ ಆರ್ಥಿಕ ವರ್ಷದಲ್ಲಿ ಪಡೆದುಕೊಂಡಿರುವ ಉದ್ದಿಮೆ ಪರವಾನಿಗೆ ಶುಲ್ಕವನ್ನು ಏಪ್ರಿಲ್ 30ರೊಳಗೆ ದಂಡ ರಹಿತವಾಗಿ ನವೀಕರಿಸಬಹುದಾಗಿದೆ. ತದನಂತರ ಪ್ರತಿ ಮೂರು ತಿಂಗಳಿಗೊಮ್ಮೆ ಶೇ. 25ರಷ್ಟು ಹೆಚ್ಚುವರಿ ದಂಡ ವಿಧಿಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 6364016558 ಅಥವಾ ವೆಬ್‍ ಸೈಟ್ ವಿಳಾಸ: mcctradelicense.com ಸಂಪರ್ಕಿಸುವಂತೆ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಕುಂತೂರು: ಚರಂಡಿಗಿಳಿದು ಹಿಂತಿರುಗಿ ನಿಂತ ಕಾರು ► ಕಾರಿನಲ್ಲಿದ್ದ ದಂಪತಿ ಪಾರು

error: Content is protected !!
Scroll to Top