ಸುಳ್ಯ: ಟ್ಯಾಪಿಂಗ್ ವೇಳೆ ಕಾಡುಹಂದಿ ದಾಳಿ- ಮಹಿಳೆಗೆ ಗಾಯ

(ನ್ಯೂಸ್ ಕಡಬ) newskadaba.com ಸುಳ್ಯ, ಫೆ. 22. ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಮಾಡುತ್ತಿದ್ದ ವೇಳೆ ಕಾಡುಹಂದಿ ದಾಳಿ ಮಾಡಿದ ಪರಿಣಾಮ ಮಹಿಳೆ ಗಂಭೀರ ಗಾಯಗೊಂಡ ಘಟನೆ ಸುಳ್ಯದಲ್ಲಿ ನಡೆದಿದೆ.


ಗಾಯಗೊಂಡ ಮಹಿಳೆಯನ್ನು ಸುಳ್ಯ ತಾಲೂಕು ದುಗಲಡ್ಕ ಕೂಟೇಲು ನಿವಾಸಿ ಪದ್ಮಾವತಿ ಎಂದು ಗುರುತಿಸಲಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರು ಕೆ.ಎಫ್.ಡಿ.ಸಿ. ರಬ್ಬರ್ ತೋಟದ ಟ್ಯಾಪರ್ ಆಗಿದ್ದು ಅವರು ಗುರುವಾರ ಮುಂಜಾನೆ ದುಗಲಡ್ಕ ಘಟಕದ ಕೂಟೇಲು ಪಿಲಿಕಜೆ ಎಂಬಲ್ಲಿ ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದ ಸಂದರ್ಭ, ಪೊದೆಯಲ್ಲಿದ್ದ ಕಾಡುಹಂದಿ ಪದ್ಮಾವತಿ ಮೇಲೆ ಏಕಾಏಕಿ ದಾಳಿ ನಡೆಸಿತೆನ್ನಲಾಗಿದೆ. ದಾಳಿಯಿಂದ ಪಾರಾಗಲು ಓಡಿದ ಮಹಿಳೆಯನ್ನು ಬೆನ್ನಟ್ಟಿದ ಕಾಡುಹಂದಿ ಮತ್ತೊಮ್ಮೆ ಕಚ್ಚಿ ತೀವ್ರ ಗಾಯಗೊಳಿಸಿರುವುದಾಗಿ ತಿಳಿದುಬಂದಿದೆ. ರಬ್ಬರ್ ತೋಟದಲ್ಲಿ ಪೊದೆಗಳು ಹೆಚ್ಚಾಗಿ ಆಳೆತ್ತರಕ್ಕೆ ಬೆಳೆದಿದ್ದು ಇದರಲ್ಲಿ ಕಾಡು ಹಂದಿ ಸೇರಿದಂತೆ ವಿವಿಧ ವನ್ಯ ಪ್ರಾಣಿಗಳು ಅವಿತು ಕುಳಿತುಕೊಳ್ಳತ್ತಿದ್ದು, ಇಂತಹ ಘಟನೆ ನಡೆಯಲು ಕಾರಣವಾಗಿದೆ ಎಂದು ಆರೋಪಿಸಲಾಗಿದೆ.

Also Read  ಉಳ್ಳಾಲ: ರೈಲ್ವೇ ಹಳಿ ದಾಟುವಾಗ ಅವಘಡ ➤ ರೈಲು ಢಿಕ್ಕಿ ಹೊಡೆದು ಯುವಕ ಮೃತ್ಯು

error: Content is protected !!
Scroll to Top