ನಟ ದರ್ಶನ್ ವಿರುದ್ದ ಫಿಲಂ ಚೇಂಬರ್ ಗೆ ದೂರು..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ. 22. ಸ್ಯಾಂಡಲ್​ವುಡ್ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಿಸಲಾಗಿದೆ.

ನಟ ದರ್ಶನ್ ಅವರು ಬಳಸಿರುವ ಪದಕ್ಕೆ ಈಗಾಗಲೇ ಅಕ್ಷೇಪ ವ್ಯಕ್ತವಾಗಿರುವ ಹಿನ್ನೆಲೆ ಫಿಲಂ ಚೇಂಬರ್ ಗೆ ದೂರು ನೀಡಲಾಗಿದೆ. ದರ್ಶನ್ ಅವರು ಗುಮ್ಮಿಸ್ಕೋತಿಯಾ ಅಂತ ಬೆದರಿಕೆ ಹಾಕಿದ್ದಾರೆ. ಇದಕ್ಕೆ ಕ್ಷಮೆಯಾಚಿಸಬೇಕು ಅಂತ ಕರ್ನಾಟಕ ಪ್ರಜಾಪರ ವೇದಿಕೆ ಮನವಿ ಮಾಡಿದೆ. ಕರ್ನಾಟಕ ಪ್ರಜಾಪರ ವೇದಿಕೆಯ ರಾಜ್ಯಾಧ್ಯಕ್ಷ ಕನ್ನಡ ಶಫಿ ಎಂಬವರು ದೂರು ನೀಡಿದ್ದಾರೆ. ಸಾರ್ವಜನಿಕ ವೇದಿಕೆಯಲ್ಲಿ ನಿರ್ಮಾಪಕನಿಗೆ ತಗಡೇ, ಗುಮುಸ್ಕೊತಿಯ ಪದ ಬಳಸಿದ್ದು ತಪ್ಪು. ಈ ನಟ ಯಾವ ಅಭಿಮಾನಿಗಳಿಗೆ ಮಾದರಿಯಾಗ್ತಾರೆ? ಎಂದು ಪ್ರಶ್ನೆ ಮಾಡಿದ್ದಾರೆ. ದರ್ಶನ್ ಬಂಡವಾಳ ಗೊತ್ತಿದೆ. ಸಾಕ್ಷಿ ಎಲ್ಲವೂ ಇದೆ. ಗುಮ್ಮುಸ್ಕೊತಿಯ ಅಂದ್ರೆ ಕೊಲೆ ಬೆದರಿಕೆ ಎಂದಿದ್ದಾರೆ.

Also Read  ಕೊಕ್ಕಡ: ಕಾರಿನಲ್ಲಿ ಕರೆದುಕೊಂಡು ಹೋಗಿ ತಂಡದಿಂದ ವ್ಯಕ್ತಿಗೆ ಹಲ್ಲೆ..!

error: Content is protected !!
Scroll to Top