ರಾಮಕುಂಜ: ಮಳೆನೀರು ಕೊಯ್ಲು ಹಾಗೂ ಬೂದುನೀರು ನಿರ್ವಹಣೆ ಕುರಿತು ತರಬೇತಿ

(ನ್ಯೂಸ್ ಕಡಬ) newskadaba.com ಕಡಬ, ಫೆ. 22. ಮಳೆನೀರು ಕೊಯ್ಲು ಹಾಗೂ ಬೂದುನೀರು ನಿರ್ವಹಣೆ ತರಬೇತಿ ಕಾರ್ಯಕ್ರಮವು ತಾಲೂಕಿನ ರಾಮಕುಂಜ ಗ್ರಾಮಪಂಚಾಯತ್ ನಲ್ಲಿ ನಡೆಯಿತು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ ಹಾಗೂ ಅನುಷ್ಠಾನ ಬೆಂಬಲ ಸಂಸ್ಥೆ ಗ್ರಾಮ್ಸ್‌ ಮಂಗಳೂರು ಸಂಯೋಗದಲ್ಲಿ ಸಂಜೀವಿನಿ ಮಹಿಳಾ ಒಕ್ಕೂಟ ಸದಸ್ಯರಿಗೆ ತರಬೇತಿ ನೀಡಲಾಯಿತು. ಜಲಜೀವನ್ ಮಿಷನ್ ಅನುಷ್ಠಾನ ಸಂಸ್ಥೆ ಗ್ರಾಮ್ಸ್ ಸಂಯೋಜಕ ಅಭಿಲಾಷ್ ಕೆ ಎಲ್ ಅವರು ಮಾಹಿತಿ ನೀಡಿದರು.

Scroll to Top