(ನ್ಯೂಸ್ ಕಡಬ) newskadaba.com ಪುತ್ತೂರು, ಫೆ. 21. ಉದ್ಯೋಗದ ನೆಪದಲ್ಲಿ ನಂಬಿಸಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿದ್ದ ಮೂವರಿಗೆ ಪುತ್ತೂರು ನ್ಯಾಯಾಲಯವು ಜಾಮೀನು ಮಂಜೂರು ಮಾಡಿರುವ ಕುರಿತು ವರದಿಯಾಗಿದೆ.
ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಆಫೀಸ್ ಖಾಲಿ ಇದೆ. ಉದ್ಯೋಗ ಇಲ್ಲದೇ ಇರುವವರಿಗೆ ಬಂದ ದಿನವೇ ಕೆಲಸ ಸಿಗುತ್ತದೆ ಎಂಬುವುದಾಗಿ ಪತ್ರಿಕೆಯಲ್ಲಿ ಜಾಹೀರಾತು ಪ್ರಕಟಿಸಿ ಬಂದ ಬಳಿಕ ಫೀಸ್ ಕೊಡಬೇಕು ಎಂದು ನಂಬಿಸಿ 7 ತಿಂಗಳಿನಿಂದ ಆನ್-ಲೈನ್ ಮುಖಾಂತರ ಒಟ್ಟು 2,25,001 ರೂ. ಗಳನ್ನು ಪಡೆದು ವ್ಯಕ್ತಿಯೋರ್ವರಿಗೆ ವಂಚಿಸುತ್ತಿದ್ದರು. ಈ ಆರೋಪದಡಿ ತುಮಕೂರಿನ ಸುಮಿತ್ರಾಬಾಯಿ, ಹಾಸನದ ಸೌಂದರ್ಯ ಹಾಗೂ ತುಮಕೂರಿನ ರಾಹುಲ್ ಕುಮಾರ್ ನಾಯ್ಕ್ ಎಂಬವರನ್ನು ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದರು. ಇದೀಗ ಬಂಧನದಲ್ಲಿರುವ ಆರೋಪಿಗಳು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಧೀಶೆ ಪ್ರಿಯಾ ಜೋಗ್ಲೇಕರ್ ಅವರು ಜಾಮೀನು ಮಂಜೂರು ಮಾಡಿದ್ದಾರೆ.