ಕಂಬಳವನ್ನು ರಾಜ್ಯಕ್ರೀಡೆಯಾಗಿ ಘೋಷಿಸಲು ಮಂಜುನಾಥ ಭಂಡಾರಿ ಆಗ್ರಹ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 21. ಮಂಗಳೂರಿನಲ್ಲಿ ಜಿಲ್ಲಾಧಿಕಾರಿಗಳು, ಕಂಬಳ ಸಮಿತಿಯ ಸದಸ್ಯರು ಹಾಗೂ ಕಂಬಳ ಆಯೋಜಕರ ಸಭೆ ನಡೆಸಿ ಕಂಬಳ ಸಮಿತಿ ರಚಿಸುವಂತೆ ಸಭಾಪತಿಗಳ ನೇತೃತ್ವದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಆದರೆ, ಈವರೆಗೆ ಸಮಿತಿ ರಚನೆಯಾಗದೇ ಇರುವುದನ್ನು ಸರಕಾರದ ಗಮನಕ್ಕೆ ತಂದು ಶೀಘ್ರವೇ ಸಮಿತಿ ರಚಿಸುವಂತೆ ವಿಧಾನಮಂಡಲದ 2024ರ ಬಜೆಟ್ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಎಂ. ಮಂಜುನಾಥ್ ಭಂಡಾರಿ ಅವರು ಸರಕಾರವನ್ನು ಆಗ್ರಹಿಸಿದರು.

ಕಳೆದ ವರ್ಷ ಪುತ್ತೂರು ಶಾಸಕ ಅಶೋಕ ಕುಮಾರ್‌ ರೈ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಕಂಬಳದ ಯಶಸ್ಸನ್ನು ಉಲ್ಲೇಖಿಸುತ್ತಾ ಸ್ಥಗಿತಗೊಂಡಿರುವ ಮಂಗಳೂರಿನ ಪಿಳಕುಳದ ಕಂಬಳವನ್ನು ಪ್ರವಾಸೋದ್ಯಮ ಇಲಾಖೆ ವತಿಯಿಂದ ಪ್ರಾರಂಭಿಸಿ ಪ್ರವಾಸೋದ್ಯಮ ಚಟುವಟಿಕೆ ಹೆಚ್ಚಿಸಲು ಹಾಗೂ ಬಹಳ ಮುಖ್ಯವಾಗಿ ಕಂಬಳವನ್ನು ರಾಜ್ಯಕ್ರೀಡೆ ಅಥವಾ ನಾಡಕ್ರೀಡೆಯಾಗಿ ಘೋಷಿಸಿ ಹೆಚ್ಚಿನ ಅನುದಾನ ನೀಡುವಂತೆ ನಿಯಮ 72ರಡಿ ಕ್ರೀಡಾ ಸಚಿವರ ಗಮನ ಸೆಳೆದಿದ್ದಾರೆ.

Also Read  ಅರಂತೋಡು- ಅಂಗಡಿಮಜಲು ರಸ್ತೆ ಕಾಮಗಾರಿಗೆ ಶಿಲಾನ್ಯಾಸ ಕಾರ್ಯಕ್ರಮ

error: Content is protected !!
Scroll to Top