ಶಿಕ್ಷಕಿಯಿಂದ ದೇವರ ಅವಹೇಳನ ವಿಚಾರದಲ್ಲಿ ಪೋಷಕರಿಗೆ ಬೆದರಿಕೆ ಕರೆ ಪ್ರಕರಣ – ಎಫ್ಐಆರ್ ದಾಖಲು

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 21. ಇಲ್ಲಿನ ಶಾಲಾ ಶಿಕ್ಷಕಿಯೋರ್ವರು ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿ, ಶಿಕ್ಷಕಿ ವಿರುದ್ಧ ಆರೋಪ ಮಾಡಿದ್ದ ವಿದ್ಯಾರ್ಥಿನಿ ಪೋಷಕರಿಗೆ ಬೆದರಿಕೆ ಹಾಕಿದ ಪ್ರಕರಣ ಸಂಬಂಧ ಎಫ್ ಐ ಆರ್ ದಾಖಲಾಗಿದೆ.

ಜೆರೋಸಾ ಶಾಲೆಯ ಶಿಕ್ಷಕಿ ವಿರುದ್ಧ ಆರೋಪ ಮಾಡಿದ್ದ ಹಿನ್ನೆಲೆ ಪೋಷಕರಿಗೆ ವಿದೇಶಗಳಿಂದ ಬೆದರಿಕೆ ಕರೆ ಬರುತ್ತಿರುವುದಾಗಿ ಕವಿತಾ ಎಂಬವರು ನೀಡಿದ ದೂರಿನ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆದು ಕಂಕನಾಡಿ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ. ವಿದೇಶದಿಂದ ಬೆದರಿಕೆ ಕರೆ ಬರುತ್ತಿರುವ ಬಗ್ಗೆ ಕವಿತಾ ಎಂಬ ಮಹಿಳೆ ಕಂಕನಾಡಿ ಪೊಲೀಸರಿಗೆ ಆಡಿಯೋ ರೆಕಾರ್ಡ್, ಸ್ಕ್ರೀನ್ ಶಾಟ್ ಸಹಿತ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.

Also Read  ಎಲ್ಲಾ ಶಾಲೆಗಳಲ್ಲಿ 'ನಾಡಗೀತೆ' ಹಾಡುವುದು ಕಡ್ಡಾಯ - ತಿದ್ದುಪಡಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ

error: Content is protected !!
Scroll to Top