ರೈಲ್ವೇ ಸೇತುವೆಯ ಸೇಫ್ ಗಾರ್ಡ್ ಗೆ ಕಂಟೇನರ್ ಲಾರಿ ಢಿಕ್ಕಿ!

(ನ್ಯೂಸ್ ಕಡಬ) newskadaba.com ವಿಟ್ಲ, ಫೆ. 21. ಕಂಟೇನರ್ ಲಾರಿ ಢಿಕ್ಕಿ ಹೊಡೆದ ಪರಿಣಾಮ ರೈಲ್ವೇ ಬ್ರಿಡ್ಜ್ ನ ಸೇಫ್ ಗಾರ್ಡ್ ರಸ್ತೆಗೆ ಅಡ್ಡಲಾಗಿ ಬಿದ್ದ ಘಟನೆ ಕಬಕ ಸಮೀಪದ ಮಿತ್ತೂರು ಎಂಬಲ್ಲಿ ನಡೆದಿದೆ.

ರೈಲ್ವೇ ಸೇತುವೆಗೆ ಘನ ವಾಹನಗಳು ತಾಗದಂತೆ ಮುಂಜಾಗರೂಕತಾ ದೃಷ್ಟಿಯಿಂದ  ಈ ಕಂಬವನ್ನು ಅಳವಡಿಸಲಾಗಿರುತ್ತದೆ. ಇದಕ್ಕೆ ಕಂಟೇನರ್ ಲಾರಿಯೊಂದು ಢಿಕ್ಕಿ ಹೊಡೆದಿದ್ದು, ಪರಿಣಾಮ ಕಂಬ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಸ್ಥಳೀಯರ ಸಹಕಾರದಿಂದ ಕಂಬವನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು ಎನ್ನಲಾಗಿದೆ.

Also Read  ರೋಲರ್ ಸಾಗಾಟದ ಲಾರಿ ಓವರ್ ಬ್ರಿಡ್ಜ್ ಗೆ ಢಿಕ್ಕಿ - ಕೆಲಕಾಲ ಸಂಚಾರ ವ್ಯತ್ಯಯ

error: Content is protected !!
Scroll to Top