ಕಡಬ: ಕರ್ತವ್ಯದ ವೇಳೆಯೇ ಕುಡಿದು ಬಸ್ಸಿನಲ್ಲಿ ಬಿದ್ದ ಗ್ರಾಮ ಕರಣಿಕ – ಸಾರ್ವಜನಿಕರಿಂದ ಆಕ್ರೋಶ

(ನ್ಯೂಸ್ ಕಡಬ) newskadaba.com ಕಡಬ, ಫೆ.20. ಕರ್ತವ್ಯದ ಮಧ್ಯೆಯೇ ಕುಡಿತದ ಮತ್ತಿನಲ್ಲಿ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಬಿದ್ದು ಹೊರಳಾಡುತ್ತಿದ್ದ ಗ್ರಾಮಕರಣಿಕನೋರ್ವನನ್ನು ಬಸ್ಸು ಚಾಲಕ ನೇರವಾಗಿ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಇಳಿಸಿದ ಘಟನೆ ಮಂಗಳವಾರ ಸಂಜೆ ಕಡಬದಲ್ಲಿ ನಡೆದಿದೆ.

ಕಡಬ ತಾಲೂಕಿನ ಗೋಳಿತೊಟ್ಟುವಿನ ಗ್ರಾಮ ಕರಣಿಕ ನಾಗಸುಂದರ ಎಂಬಾತ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಬಸ್ಸಿನಲ್ಲಿ ಕುಡಿದು ಹೊರಳಾಡುತ್ತಿದ್ದ ಎನ್ನಲಾಗಿದೆ. ಪ್ರಯಾಣಿಕರ ದೂರಿನ ಮೇರೆಗೆ ಬಸ್ಸು ಚಾಲಕ ಠಾಣೆಯ ಮುಂಭಾಗಕ್ಕೆ ಬಂದು ಬಸ್ಸನ್ನು ನಿಲ್ಲಿಸಿದ್ದು, ನಾಗಸುಂದರನನ್ನು ಇಳಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಹಿಂದೆಯೂ ಹಲವು ಬಾರಿ ಈತ ಮದ್ಯಪಾನ ಮಾಡಿ ಬಿದ್ದಿದ್ದು, ನಾಗಸುಂದರನ ಮದ್ಯಪಾನದ ಚಟದ ಬಗ್ಗೆ ಮೇಲಾಧಿಕಾರಿಗಳಿಗೆ ದೂರನ್ನೂ ನೀಡಲಾಗಿತ್ತು. ಕರ್ತವ್ಯದ ವೇಳೆಯೇ ಮದ್ಯಪಾನದ ಚಟ ಹೊಂದಿರುವ ಈತನ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Also Read  ಪುಣ್ಚಪ್ಪಾಡಿ ಬೂತ್ ಬಿಜೆಪಿ ಸ್ಥಾಪನ ದಿನಾಚರಣೆ

error: Content is protected !!
Scroll to Top