ಬೆಳ್ತಂಗಡಿ:ಯುವಕರಿಬ್ಬರ ಮೇಲೆ ಹಲ್ಲೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜೂ.26. ಮರಳು ವ್ಯಾಪಾರಿ ಯುವಕರಿಬ್ಬರನ್ನು ವ್ಯವಹಾರದ ಉದ್ದೇಶದಿಂದ ಫೋನ್ ಮಾಡಿ ಕರೆಸಿ ಬಳಿಕ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಎಂಬಲ್ಲಿ ನಡೆದಿದೆ.

ಅಡ್ಡೂರು ನಿವಾಸಿಗಳಾದ ಇರ್ಫಾನ್ ಮತ್ತು ನಿಸಾರ್ ಹಲ್ಲೆಗೊಳಗಾದವರು ಎಂದು ಗುರುತಿಸಲಾಗಿದೆ.

ಮರಳು ವ್ಯಾಪಾರಿಗಳಾದ ಇಬ್ಬರನ್ನು ವ್ಯವಹಾರದ ನೆಪದಲ್ಲಿ ಕರೆಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಗಂಭೀರ ಗಾಯಗೊಂಡ ಯುವಕರು ತಮ್ಮ ಗೆಳೆಯನಿಗೆ ಕರೆ ಮಾಡಿ ಈ ಬಗ್ಗೆ ತಿಳಿಸಿ ಬಳಿಕ ಪೊಲೀಸ್ ಕಂಟ್ರೋಲ್ ರೂಮ್ ಗೆ ಮಾಹಿತಿ ನೀಡಿದ್ದಾರೆ.

Also Read  ಹಿಜಾಬ್ ಧರಿಸಿ ಕಾಲೇಜಿಗೆ ಪ್ರವೇಶಿಸಿದ ವಿದ್ಯಾರ್ಥಿಗಳು- ಮತ್ತೆ ತರಗತಿಯಿಂದ ಹೊರಕ್ಕೆ..!

ಗಂಭೀರ ಗಾಯಗೊಂಡ ಇರ್ಫಾನ್ ಮತ್ತು ನಿಸಾರ್ ರನ್ನು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆಗೆ ಸ್ಪಷ್ಟ ಕಾರಣ ಇನ್ನಷ್ಟೆ ತಿಳಿದುಬರಬೇಕಿದೆ.

ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಹಲ್ಲೆ ಮಾಡಿದ ದುಷ್ಕರ್ಮಿಗಳ ತಂಡವನ್ನು ಪೊಲೀಸರು ಶೋಧ ನಡೆಸುತ್ತಿದ್ದಾರೆ. ಘಟನಾಸ್ಥಳಕ್ಕೆ ಎಸ್ಪಿ, ಡಿವೈಎಸ್ ಪಿ ಮತ್ತು ಅಡಿಷನಲ್ ಎಸ್ಪಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಭದ್ರತೆಗಾಗಿ ಸ್ಥಳದಲ್ಲಿ ಕೆ ಎಸ್ ಆರ್ ಪಿ ತುಕಡಿಯನ್ನು ನಿಯೋಜನೆ ಮಾಡಲಾಗಿದೆ.

error: Content is protected !!
Scroll to Top