ಬೆಳ್ಳುಳ್ಳಿ ದರ ಏರಿಕೆ ಬೆನ್ನಲ್ಲೇ ಈರುಳ್ಳಿ ಬೆಲೆ ದಿಢೀರ್ ಹೆಚ್ಚಳ

(ನ್ಯೂಸ್ ಕಡಬ) newskadab.com ನವದೆಹಲಿ, ಫೆ. 20. ಈರುಳ್ಳಿ ಬೆಲೆಯು ಏರಿಕೆಯಾಗಿದ್ದು, ಇದೀಗ ಬೆಲೆ ಹೆಚ್ಚಳದಿಂದ ಜನಸಾಮಾನ್ಯರಿಗೆ ಹೊರೆ ಬಿದ್ದಂತಾಗಿದೆ.

ಕೇಂದ್ರ ಸರ್ಕಾರವು ಈರುಳ್ಳಿ ರಫ್ತು ನಿಷೇಧವನ್ನು ಹಿಂಪಡೆದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿರುವುದಾಗಿ ವರದಿ ತಿಳಿಸಿದೆ. ದೇಶದ ಅತೀ ದೊಡ್ಡ ಈರುಳ್ಳಿ ಮಾರುಕಟ್ಟೆಯಾದ ಲಾಸಲ್ ಗಾಂವ್ ಕೃಷಿ ಉತ್ಪಾದನಾ ಮಾರುಕಟ್ಟೆಯಲ್ಲಿ ಈರುಳ್ಳಿ ರಖಂ ಮಾರಾಟ ಬೆಲೆ ಶೇ. 40ರಷ್ಟು ಏರಿಕೆ ಕಂಡಿರುವುದಾಗಿ ವರದಿಯಾಗಿದೆ. ಈರುಳ್ಳಿ ಪ್ರತಿ ಕ್ವಿಂಟಾಲ್ ಬೆಲೆ 1,280 ರೂಪಾಯಿಯಿಂದ 1,800 ರೂಪಾಯಿಗೆ ಏರಿಕೆಯಾಗಿದೆ. ಅದೇ ರೀತಿ ಕನಿಷ್ಠ ಬೆಲೆಯ 1,000 ಹಾಗೂ ಗರಿಷ್ಠ ಬೆಲೆ ಕ್ವಿಂಟಾಲ್ ಗೆ 2,100 ರೂಪಾಯಿಗೆ ಹೆಚ್ಚಳವಾಗಿರುವುದು ಕಂಡು ಬಂದಿದೆ.

Also Read  ಜನವರಿ 20 ರ ನಂತರ ವಿದೇಶದಿಂದ ಬಂದವರು ಏನು ಮಾಡಬೇಕು..? ➤ ದ.ಕ. ಜಿಲ್ಲಾಧಿಕಾರಿ ಹೇಳಿದ್ದೇನು ಗೊತ್ತೇ..?

error: Content is protected !!
Scroll to Top