ಹೃದಯಾಘಾತ- ಖ್ಯಾತ ಕಿರುತೆರೆ ನಟ ನಿಧನ

(ನ್ಯೂಸ್ ಕಡಬ) newskadaba.com ಮುಂಬೈ, ಫೆ. 20.  ಖ್ಯಾತ ಕಿರುತೆರೆ ನಟ ರಿತುರಾಜ್ ಸಿಂಗ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 59 ವರ್ಷ ವಯಸ್ಸಾಗಿತ್ತು.

ಪ್ಯಾಂಕ್ರಿಯಾಟಿಕ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಇತ್ತೀಚೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರು ಬಾಲಿವುಡ್ ಸಿನಿಮಾಗಳಾದ ಬದರಿನಾಥ್ ಕಿ ದುಲ್ಹನಿಯಾ (2017), ವಾಶ್-ಪಾಸೆಸ್ಡ್ ಬೈ ದಿ ಒಬ್ಸೆಸ್ಡ್, ಮತ್ತು ಥುನಿವು (2023) ನಂತಹ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ವರ್ಷ ಬಿಡುಗಡೆಯಾದ ಯಾರಿಯನ್ 2 ಅವರ ಕೊನೆಯ ಸಿನೆಮಾವಾಗಿತ್ತು. ರಿತುರಾಜ್ ದಿ ಟೆಸ್ಟ್ ಕೇಸ್, ಹೇ ಪ್ರಭು, ಕ್ರಿಮಿನಲ್, ಅಭಯ್, ಬಂದಿಶ್ ಬ್ಯಾಂಡಿಟ್ಸ್, ನೆವರ್ ಕಿಸ್ ಯುವರ್ ಬೆಸ್ಟ್ ಫ್ರೆಂಡ್ ಮತ್ತು ಮೇಡ್ ಇನ್ ಹೆವನ್ ಸೀಸನ್ 2 ಸೇರಿದಂತೆ ಹಲವಾರು ವೆಬ್ ಸೀರೀಸ್‌ನಲ್ಲಿಯೂ ನಟಿಸಿದ್ದರು.

Also Read  ಕಡಬ: ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯ ಮಂತ್ರಿಮಂಡಲ ರಚನೆ

error: Content is protected !!
Scroll to Top