ಸಂತ ಸೇವಾಲಾಲ್ ಆದರ್ಶ ಅಳವಡಿಸಲು ಕರೆ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 20. ಸಂತ ಸೇವಾಲಾಲ್ ಅವರ ಜನ್ಮ ಜಯಂತಿಯನ್ನು ಆಚರಿಸುವುದರೊಂದಿಗೆ ಅವರ ಆದರ್ಶಗಳನ್ನು ನಮ್ಮ ಜೀವನಕ್ಕೆ ಅಳವಡಿಸಿಕೊಂಡರೆ ಈ ಕಾರ್ಯಕ್ರಮ ಅರ್ಥಪೂರ್ಣವಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ರಾಜು ಕೆ. ಹೇಳಿದರು. ಅವರು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿಶೇಷ ಉಪನ್ಯಾಸವನ್ನು ನೀಡಿದ ಸುರತ್ಕಲ್‍ನ ಎನ್‍ಐಟಿಕೆ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ. ಗೀತಾ ಮಾತನಾಡಿ, ಸಂತ ಸೇವಾಲಾಲ್ ಎಲ್ಲರಿಗೂ ಒಳಿತಾಗಲಿ ಎಂಬ ಮಾನವೀಯತೆಯ ಸಂದೇಶದ ಬದುಕನ್ನು ಬಾಳುತ್ತಾ ಪ್ರತಿಕ್ಷಣವನ್ನು ತಮ್ಮದಾಗಿಸಿದವರು ಎಂದರು. ಈ ಸಂದರ್ಭದಲ್ಲಿ ಮೆಸ್ಕಾಂ ಪ್ರಧಾನ ವ್ಯವಸ್ಥಾಪಕ ಅಭಿಷೇಕ್, ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಕುಮಾರ್ ನಾಯ್ಕ್, ಕರಾವಳಿ ಸೇವಾಲಾಲ್ ಬಂಜಾರ (ಲಂಬಾಣಿ ) ಸಂಘ ಅಧ್ಯಕ್ಷ ರಾಜಪ್ಪ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ. ಸ್ವಾಗತಿಸಿದರು.

Also Read  ಬೊಳುವಾರು: ಗುಜಿರಿ ಅಂಗಡಿಗೆ ಬೆಂಕಿ

error: Content is protected !!
Scroll to Top