ಬಿಎಂಟಿಸಿ ನೌಕರರಿಗೆ ಗುಡ್ ನ್ಯೂಸ್ – ಕೆಎಸ್ಸಾರ್ಟಿಸಿ ಮಾದರಿಯಲ್ಲಿ 1 ಕೋಟಿ ರೂ. ವಿಮಾ ಸೌಲಭ್ಯ ಜಾರಿ

(ನ್ಯೂಸ್‌ ಕಡಬ) newskadaba.com ಬೆಂಗಳೂರು, ಫೆ. 19. ಇನ್ನುಮುಂದೆ KSRTC ನೌಕರರ ಮಾದರಿಯಲ್ಲಿಯೇ  ಬಿಎಂಟಿಸಿ ನೌಕರರ ಕುಟುಂಬಕ್ಕೂ 1 ಕೋಟಿ ರೂಪಾಯಿ ಅಪಘಾತ ವಿಮೆ ಸೌಲಭ್ಯ ಪರಿಹಾರ ಜಾರಿಗೊಳಿಸುವುದಾಗಿ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ.

ಈ ವಿಮಾ ಸೌಲಭ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸೂಚನೆ ಮೇರೆಗೆ ಇಂದಿನಿಂದಲೇ ಜಾರಿಗೆ ಬರಲಿದ್ದು, 28 ಸಾವಿರ ನೌಕರರ ಕುಟುಂಬಗಳಿಗೆ ಹೊಸ ವಿಮಾ ಸೌಲಭ್ಯ ಸಿಗಲಿದೆ. ಇಲ್ಲಿಯವರೆಗೆ ಕೆ.ಎಸ್.ಆರ್.ಟಿ.ಸಿ ನೌಕರರು ಅಪಘಾತದಲ್ಲಿ ಮೃತಪಟ್ಟರೆ 1 ಕೋಟಿ ಪರಿಹಾರ ನೀಡಿದರೆ, ಬಿಎಂಟಿಸಿ ನೌಕರರಿಗೆ ಕೇವಲ 3 ಲಕ್ಷ ರೂ ಮಾತ್ರ ಪರಿಹಾರ ನೀಡಲಾಗುತ್ತಿತ್ತು. ಇದೀಗ ಬಿಎಂಟಿಸಿ ನೌಕರರು ಅಪಘಾತದಲ್ಲಿ ಮೃತಪಟ್ಟರೆ ಅವರ ಕುಟುಂಬಗಳಿಗೂ 1 ಕೋಟಿ ವಿಮಾ ಸೌಲಭ್ಯ ನೀಡಲಾಗುತ್ತದೆ. ಅಲ್ಲದೇ ಸ್ವಾಭಾವಿಕವಾಗಿ ಮೃತಪಟ್ಟರೆ, 10 ಲಕ್ಷ ರೂ.ಗಳ ಪರಿಹಾರ ಸಿಗಲಿದೆ ಎಂದು ಬಿಎಂಟಿಸಿ ಎಂ.ಡಿ.ರಾಮಚಂದ್ರನ್ ಮಾಹಿತಿ ನೀಡಿದ್ದಾರೆ.

Also Read  ಇಂದು ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಅನಾವರಣ ➤ 66ನೇ ಮಹಾ ಪರಿನಿರ್ವಾಣ ದಿನಾಚರಣೆ

error: Content is protected !!
Scroll to Top