ದಕ್ಷಿಣ ಕನ್ನಡ ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ವರ್ಗಾವಣೆ

(ನ್ಯೂಸ್‌ ಕಡಬ) newskadaba.com ಮಂಗಳೂರು, ಫೆ. 19. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಸಂಬಂಧಿಸಿದಂತೆ 2024ರ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಜಿಲ್ಲಾ ವಾರ್ತಾಧಿಕಾರಿಗಳನ್ನು ವರ್ಗಾಯಿಸಿ ಇಲಾಖೆಯ ಆಯುಕ್ತ ಹೇಮಂತ ಹೇಮಂತ್ ನಿಂಬಾಳ್ಕರ್ ಆದೇಶ ಹೊರಡಿಸಿದ್ದಾರೆ.

ದ.ಕ. ಜಿಲ್ಲಾ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಎ.ಖಾದರ್ ಶಾ ಅವರನ್ನು ಹಾಸನಕ್ಕೂ, ಹಾಸನದ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಮೀನಾಕ್ಷಮ್ಮ ಅವರನ್ನು ದ.ಕ. ಜಿಲ್ಲೆಗೂ ವರ್ಗಾಯಿಸಲಾಗಿದೆ. ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೆ ಈ ವರ್ಗಾವಣೆಯಾದ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಿ ಬಳಿಕ ಸದ್ರಿ ಕಚೇರಿಯಿಂದ ಬಿಡುಗಡೆ ಹೊಂದಿ ಪ್ರಸ್ತುತ ನಿರ್ವಹಿಸುತ್ತಿರುವ ಕಚೇರಿಯಲ್ಲಿ ಮುಂದುವರಿಯಲು ಸೂಚಿಸಲಾಗಿದೆ.

Also Read  ಚಾಲಕನ ನಿಯಂತ್ರಣ ತಪ್ಪಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ

error: Content is protected !!
Scroll to Top