(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 19. 2024-25 ನೇ ಸಾಲಿಗೆ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಕಂದುಬಾಳೆ, ಅಂಗಾಂಶ ಬಾಳೆ, ಅನಾನಸು, ರಾಂಬುಟಾನ್, ಮ್ಯಾಂಗೋಸ್ಟೀನ್, ಬೆಣ್ಣೆ ಹಣ್ಣು, ಮಲ್ಲಿಗೆ, ಕಾಳುಮೆಣಸು, ಜಾಯಿಕಾಯಿ, ಗೇರು, ಕೊಕೊ ಇತ್ಯಾದಿ ತೋಟಗಾರಿಕೆ ಬೆಳೆಗಳ ಹೊಸ ತೋಟ ಸ್ಥಾಪನೆಗೆ, ಹಳೆ ಕಾಳುಮೆಣಸು ತೋಟಗಳ ಪುನಶ್ಚೇತನ ಕೈಗೊಳ್ಳಲು, ನೀರು ಸಂಗ್ರಹಣಾ ಘಟಕ, ಪ್ಯಾಕ್ಹೌಸ್, ಪಾಲಿಮನೆ, ಅಣಬೆ ಉತ್ಪಾದನಾ ಘಟಕ ಗಳನ್ನು ನಿರ್ಮಾಣ ಮಾಡಲು ಸಹಾಯಧನ ಸೌಲಭ್ಯ ಲಭ್ಯವಿರುತ್ತದೆ.
ಹೆಚ್ಚಿನ ಮಾಹಿತಿಗೆ ಮಂಗಳೂರು ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ದೂ.ಸಂಖ್ಯೆ: 9449258204 (0824-2423615), ಬಂಟ್ವಾಳ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ದೂ.ಸಂಖ್ಯೆ: 9448206393, (08255-234102), ಪುತ್ತೂರು ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ದೂ.ಸಂಖ್ಯೆ: 9731854527 (08251-230905), ಸುಳ್ಯ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ದೂ.ಸಂಖ್ಯೆ: 9880993238 (08257-232020) ಹಾಗೂ ಬೆಳ್ತಂಗಡಿ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ದೂ.ಸಂಖ್ಯೆ – 9448336863 (08256-232148) ಅನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.